ತಿದ್ದುಪಡಿ ಮಸೂದೆಗೆ ಸ್ವಾಗತ
ಶಿವಮೊಗ್ಗ: ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ಮತ್ತು ವಾರ್ಡ್ಸಭೆಗಳನ್ನು ನಡೆಸಲು ವಿಫಲರಾಗುವ ಗ್ರಾ.ಪಂ ಅಧ್ಯಕ್ಷ ಮತ್ತು ವಾರ್ಡ್ ಸದಸ್ಯರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ಹೊಳಲೂರು ಮಾಜಿ ಪ್ರಧಾನರು ಹಾಗೂ ಗ್ರಾ.ಪಂ ಸದಸ್ಯ ಕೆ.ಜಿ. ನಿಂಗಪ್ಪ ಸ್ವಾಗತಿಸಿದ್ದಾರೆ.
ಅಧ್ಯಕ್ಷರು ಮತ್ತು ಸದಸ್ಯರನ್ನು ಅನರ್ಹಗೊಳಿಸಲು ಅವಕಾಶ ಕಲ್ಪಿಸುವ ಜೊತೆಗೆ ಗ್ರಾ.ಪಂ. ಪಿಡಿಓ, ಕಾರ್ಯದರ್ಶಿ ಅವರ ಅಧಿಕಾರವನ್ನು ಸಹ ವಜಾಗೊಳಿಸುವಂತೆ ಮಸೂದೆಗೆ ತಿದ್ದುಪಡಿ ತರುಬೇಕು. ಪ್ರಸಕ್ತ ನಮ್ಮ ರಾಜಕೀಯ ಮುಖಂಡರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕೆಲವು ಅಧಿಕಾರಿಗಳೊಂದಿಗೆ ಸಮುದಾಯದ ಬದುಕನ್ನು ನರಕಗೊಳಿಸಿದ್ದು, ಪ್ರಜಾಪ್ರಭುತ್ವ ಮತ್ತು ರಾಜಕೀಯ ವ್ಯವಸ್ಥೆಯನ್ನು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಇಂದು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಸಂಬಂಧವಾಗಿ ಪಂಚಾಯತ್ ಮಂತ್ರಿಗಳು ಕಾನೂನು ಜಾರಿಗೊಳಿಸುವಂತೆ ಕೆ.ಜಿ. ನಿಂಗಪ್ಪ ಒತ್ತಾಯಿಸಿದ್ದಾರೆ.