ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾರು ಪಲ್ಟಿ: ಇಬ್ಬರು ಸಾವು

Lingaraj Badiger
Updated On : 10 Jul 2013, 10:53 am

ಶಿವಮೊಗ್ಗ: ವೇಗವಾಗಿ ಬಂದ ಕಾರೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಯನೂರಿನ ಹಣಗೆರೆಕಟ್ಟೆ ಬಳಿ ಮಂಗಳವಾರ ನಸುಕಿನಲ್ಲಿ ನಡೆದಿದೆ. ನಗರದ ಲಷ್ಕರ್ ಮೊಹಲ್ಲಾದ ಜಹನಾಬಿ(55) ಮತ್ತು ಸೈಯದ್ ರಿಯಾಜ್ (26) ಮೃತರು. ಕಾರಿನಲ್ಲಿದ್ದ ಉಳಿದ ಮೂವರು ತೀವ್ರ ಗಾಯಗೊಂಡಿದ್ದಾರೆ. ಈ ವೇಳೆ ಯುವತಿಯೊಬ್ಬಳ  ಕಾಲು ಮುರಿದಿದೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.
ಲಾರಿ ಪಲ್ಟಿ
ಸಾಗರ: ತಾಲೂಕಿನ ಆನಂದಪುರಂ ಸಮೀಪದ ಆಚಾಪುರ ಕೆರೆಗೆ ಅಕೇಶಿಯಾ ತುಂಡುಗಳನ್ನು ಒಯ್ಯುತ್ತಿದ್ದ ಲಾರಿಯೊಂದು ಸೋಮವಾರ ರಾತ್ರಿ ಪಲ್ಟಿ ಹೊಡೆದಿದ್ದು ಚಾಲಕ ಹಾಗೂ ನಿರ್ವಾಹಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಶಿರಸಿಯಿಂದ ಹುಣಸೂರಿಗೆ ಅಕೇಶಿಯಾ ನಾಟವನ್ನು ಕೊಂಡೊಯ್ಯುತ್ತಿದ್ದ ಲಾರಿ ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಚಾಲಕ ನಿರ್ವಾಹಕನಿಗೆ ಸಣ್ಣಪುಟ್ಟ ಗಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement