ಪುಸ್ತಕ ಹಬ್ಬ
ಶಿವಮೊಗ್ಗ: ವಿಜಯ ವಾಹಿನಿ ಪಬ್ಲಿಕೇಷನ್ಸ್, ಸಾಯಿಶ್ಯಾಂ ಬುಕ್ಸ್ ಅಂಡ್ ಸ್ಟೇಷನರ್ಸ್ ಜುಲೈ 10ರಿಂದ 14ರವರೆಗೆ ಕರ್ನಾಟಕ ಸಂಘದಲ್ಲಿ ಬೆಳಗ್ಗೆ 11ರಿಂದ ರಾತ್ರಿ 8.30ರವರೆಗೆ ಪುಸ್ತಕ ಹಬ್ಬ ಆಯೋಜಿಸಿದೆ. ಕನ್ನಡ-ಇಂಗ್ಲಿಷ್ನ ಜನಪ್ರಿಯ ಕೃತಿಗಳು, ಸಚಿತ್ರ ವರ್ಣರಂಜಿತ ಮಕ್ಕಳ ಶೈಕ್ಷಣಿಕ ಪುಸ್ತಕಗಳು, ಅಧ್ಯಯನ ಶೀಲ ಓದುಗರ ಪ್ರಚಲಿತ ವಿದ್ಯಮಾನಗಳನ್ನು ಕುರಿತ ಗ್ರಂಥಗಳು, ಶಬ್ದಕೋಶ, ವಿಶ್ವಕೋಶ, ಆರೋಗ್ಯ, ಜ್ಯೋತಿಷ್ಯ, ಸ್ವಾವಲಂಬನೆ, ಸ್ವ-ಉದ್ಯೋಗ, ಕ್ವಿಜ್, ಪಾಕಶಾಸ್ತ್ರ, ಧಾರ್ಮಿಕ, ಐತಿಹಾಸಿಕ ಸಾಮಾಜಿಕ- ಕಾದಂಬರಿಗಳು, ಕಥೆಗಳು, ಜೀವನ ಚರಿತ್ರೆಗಳು, ನಾಟಕಗಳು, ಸಾಮಾಜಿಕ ಕಾದಂಬರಿಗಳು, ಭಾವಗೀತೆ, ಪೌರಾಣಿಕ ಕಥೆಗಳು ಇತ್ಯಾದಿ ಪುಸ್ತಕಗಳು ಇಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಎಲ್ಲಾ ಪುಸ್ತಕಗಳ ಮೇಲೆ ಶೇ.10ರಿಂದ 25ರವರೆಗೆ ರಿಯಾಯಿತಿ ಮಾರಾಟ ಮತ್ತು ಶಾಲಾ ಕಾಲೇಜು ಹಾಗೂ ಗ್ರಂಥಾಲಯಗಳಿಗೆ ವಿಶೇಷ ರಿಯಾಯಿತಿ ಇರುತ್ತದೆ ಎಂದು ಪ್ರಕಾಶಕರು ತಿಳಿಸಿದ್ದಾರೆ. 10ರಂದು ಸಂಜೆ 6 ಗಂಟೆಗೆ ಪುಸ್ತಕ ಹಬ್ಬವನ್ನು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹರಿಕುಮಾರ್, ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ವಿದ್ವಾನ್ ವಿ.ಎನ್.ಭಟ್ ಉಪಸ್ಥಿತರಿರುವರು. ಬಡ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಉಚಿತ ಪುಸ್ತಕ ವಿತರಣೆ ನಡೆಯುವುದು ಎಂದು ಸಂಸ್ಥೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.