ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲೆಗೆ 74,65,550 ಕ್ವಿಂಟಲ್ ಅಕ್ಕಿ ಅಗತ್ಯ

Lingaraj Badiger
Updated On : 11 Jul 2013, 10:44 am

ಜಿಲ್ಲೆಯಲ್ಲಿ ಒಟ್ಟು 2,62,810 ಬಿಪಿಎಲ್ ಹಾಗೂ 38, 707 ಅಂತ್ಯೋದಯ ಕಾರ್ಡ್ದಾರರಿದ್ದಾರೆ. ಈ ಪೈಕಿ ಒಬ್ಬ ಸದಸ್ಯರಿರುವ 9,559 ಕಾರ್ಡ್ದಾರಿರಗೆ 10 ಕೆ.ಜಿ, ಇಬ್ಬರು ಸದಸ್ಯರಿರುವ 22,757 ಕಾರ್ಡ್ದಾರಿರಗೆ 20 ಕೆ.ಜಿ, ಮೂರಕ್ಕಿಂತ ಹೆಚ್ಚು ಸದಸ್ಯರಿರುವ 2,30, 494 ಕಾರ್ಡ್ದಾರಿರಿಗೆ 30 ಕೆ.ಜಿ ಅಕ್ಕಿಯಂತೆ ಜಿಲ್ಲೆಯಲ್ಲಿ ಎಲ್ಲಾ ಕಾರ್ಡ್ದಾರಿರಿಗೆ ಪ್ರತಿ ತಿಂಗಳು ಸುಮಾರ 74,65,550 ಕ್ವಿಂಟಲ್ ಅಕ್ಕಿ ಅಗತ್ಯವಿದೆ ಎಂದು ಜಿಲ್ಲಾ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಂಜನಾಥ್ ಮಾರ್ಪಳ್ಳಿ ತಿಳಿಸಿದರು.
ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿಯನ್ನು ಜಿಲ್ಲೆಯ ಗೋದಾಮುಗಳಲ್ಲಿ ಈಗಾಗಲೇ ದಾಸ್ತಾನು ಮಾಡಲಾಗಿದೆ. ಸಮರ್ಪಕವಾಗಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.

ಯೋಜನೆ ನಿಲ್ಲಿಸಬೇಡಿ...
ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ 2ಕ್ಕೆ ಅಕ್ಕಿ ಕೊಟ್ಟಿದ್ರು. ನೀವು 1ಕ್ಕೆ ಕೊಡ್ತಿದ್ದೀರಿ. ಅದು ಒಳ್ಳೇದೇ. ಯಾವ ಕಾರಣಕ್ಕೂ ನಿಲ್ಲಿಸ್ಬೇಡಿ. 6 ತಿಂಗಳಿಂದ ನಂಗೆ ಪೆನ್ಷನ್ ಬರ್ತಿಲ್ಲ. ಅದನ್ನು ಮುಂಚೆ ಕೊಡಿಸಿಕೊಡಿ...
ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತು ಮುಗಿಸಿ ಸ್ವಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ವೇದಿಕೆ ಎದುರು ಬಂದ ನಗರದ ಬಾಪೂಜಿ ನಗರದ ವಯೋವೃದ್ಧೆ ಬೀಬಿಜಾನ್ ದೊಡ್ಡ ಸ್ವರದಲ್ಲಿ ಅವರೊಂದಿಗೆ ಮಾತನಾಡತೊಡಗಿದರು.
ಆಗ ವಿಧಾನಸಭೆ ಸಭಾಪತಿ ಕಾಗೋಡು ತಿಮ್ಮಪ್ಪ ಅವರು ವೇದಿಕೆಯ ಮೇಲೆ ಬರುವಂತೆ ಹೇಳಿ ಅಹವಾಲು ಆಲಿಸಿದರು.
1ಕ್ಕೆ ಅಕ್ಕಿ ಕೊಡೋಕೆ ಶುರು ಮಾಡಿದ್ದೀರಿ. ಒಂದೆರಡು ತಿಂಗಳು ಕೊಟ್ಟಂತೆ ಮಾಡಿ ನಿಲ್ಲಿಸಬೇಡಿ ಎಂದು ಕೇಳಿದರು. ಅಹವಾಲು ಹೇಳುತ್ತಲೇ ಇದ್ದ ಅವರಿಗೆ ಕಾಗೋಡು-ಕಿಮ್ಮನೆ ಸಮಾಧಾನ ಮಾಡಿ ಕಳುಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement