ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದಸಂಸ ಮಾಚೇನಹಳ್ಳಿ ಶಾಖೆ ಆರಂಭ

Lingaraj Badiger
Updated On : 11 Jul 2013, 10:50 am

ಶಿವಮೊಗ್ಗ: ಹೋರಾಟ ನಡೆಯುವುದು ಸಂಘಟನೆಯಿಂದ, ಸಂಘಟನೆಯಾಗುವುದು ಹೋರಾಟಕ್ಕಾಗಿ. ಅನ್ಯಾಯ, ತುಳಿತ, ಶೋಷಣೆ ಎಲ್ಲಿರುತ್ತದೆಯೋ ಅಲ್ಲಿ ಸಂಘಟನೆ, ಹೋರಾಟಗಳು ಅನಿವಾರ್ಯವಾಗುತ್ತವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
ಮಾಚೇನಹಳ್ಳಿಯಲ್ಲಿ ದಸಂಸ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, ಬಡತನ ಎಲ್ಲ ಜಾತಿಗಳಲ್ಲೂ ಇದೆ. ಹಾಗಾಗಿ ದಲಿತ ಚಳವಳಿ ಎಲ್ಲಾ ಬಡಜನರ ಚಳವಳಿಯಾಗಬೇಕು ಎಂದರು.
   ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಟಿ.ಎಚ್. ಹಾಲೇಶಪ್ಪ, ಬೊಮ್ಮನಕಟ್ಟೆ ಹನುಮಂತಪ್ಪ, ಗ್ರಾಮದ ಮುಖಂಡರಾದ ಕೆಂಚಪ್ಪ, ಮಂಜುನಾಥ್, ಹರೀಶ್, ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement