ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪುನಶ್ಚೇತನ ಕಾರ್ಯಕ್ರಮ

Lingaraj Badiger
Updated On : 11 Jul 2013, 10:51 am

2013-14ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಪುನಶ್ಚೇತನ ಕಾರ್ಯಕ್ರಮದಡಿ 15 ವರ್ಷ ಮೇಲ್ಪಟ್ಟ ಮಾವಿನ ತೋಟದಲ್ಲಿ ಗಿಡಗಳಿಗೆ ಹಾಗೂ ಅಡಕೆಯಲ್ಲಿ ಕಾಳುಮೆಣಸು, ಕೋಕೋ ಬೆಳೆಯಲು ಇಚ್ಚಿಸುವ ರೈತರಿಗೆ ಇಲಾಖೆಯಲ್ಲಿ ಸಹಾಯಧನವಿರುತ್ತದೆ. ಹೆಚ್ಚಿನ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕೋರಿದ್ದಾರೆ. ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಜಿಪಂ, ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸಲು ಕೋರಿದೆ. ದೂರವಾಣಿ ಸಂಖ್ಯೆ- 08182-270415

ಇಂದು ಚಿಂತನಾ ಸಭೆ
ಶಿವಮೊಗ್ಗ: ಓದುಗರ ಚಾವಡಿ ಜುಲೈ 11ರಂದು ಸಂಜೆ 6.30ಕ್ಕೆ ಮಧುಕೃಪಾ ಪಂಚವಟಿ ಕಾಲೋನಿಯಲ್ಲಿ ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಶ್ರೀರಾಮನ ಪಾತ್ರದ ಕುರಿತಂತೆ ಓದುಗರ ಚಾವಡಿಯಲ್ಲಿ ಚಿಂತನಾ ಸಭೆ ಹಮ್ಮಿಕೊಂಡಿದೆ. ಆಸಕ್ತ ಓದುಗರು ಪುಸ್ತಕ ಓದಿ ಓದುಗರ ಚಾವಡಿಯಲ್ಲಿ ಪಾಲ್ಗೊಳ್ಳಬಹುದು ಎಂದು ಚಾವಡಿಯ ಪಿ. ಶಿವಣ್ಣ ತಿಳಿಸಿದ್ದಾರೆ. ವಿವರಗಳಿಗಾಗಿ- 9449060116.
ಉಚಿತ ತರಬೇತಿ
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಜುಲೈ 17ರಿಂದ 27ರವರೆಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಮತ್ತು ಗ್ರಾಮೀಣ ಬ್ಯಾಂಕ್ಗಳಲ್ಲಿನ ವಿವಿಧ ಹುದ್ದೆಗಳಿಗೆ ಆಯ್ಕೆ ಸಂಬಂಧ ಐಬಿಪಿಎಸ್ ಪರೀಕ್ಷಾ ಪೂರ್ವ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಪಿಯುಸಿ, ಬಿ.ಕಾಂ, ಬಿಬಿಎಂ, ಬಿಎಸ್ಸಿ, ಬಿ.ಎ ಅಥವಾ ಯಾವುದೇ ಪದವಿ ಪಡೆದವರು ಈ  ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಜಿಲ್ಲಾ ವಿನಿಮಯ ಕಚೇರಿಯ ಬಿ.ಎಸ್. ಮಲಕಿನಕೊಪ್ಪ ತಿಳಿಸಿದ್ದಾರೆ. ವಿವರಗಳಿಗಾಗಿ- 08182-255293.
ಉದ್ಘಾಟನೆ
ಶಿವಮೊಗ್ಗ: ಕಸ್ತೂರಬಾ ಬಾಲಿಕಾ ಪದವಿ-ಪೂರ್ವ ಕಾಲೇಜು ಜುಲೈ 13ರಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ದಿ.ಎಸ್.ಆರ್. ನಾಗಪ್ಪ ಶ್ರೇಷ್ಠಿ ಅವರ ಜನ್ಮಶತಮಾನೋತ್ಸವ ಸ್ಮರಣೆ ಹಾಗೂ ವಿದ್ಯಾರ್ಥಿನಿ ಸಂಘ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಅತಿಥಿಯಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ನಿರ್ದೇಶಕ ಜಿ.ಎಸ್. ನಾರಾಯಣರಾವ್ ಪಾಲ್ಗೊಳ್ಳುವರು. ಪದವಿ ಪೂರ್ವ ಮತ್ತು ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಕೆ. ನಾಗರಾಜ ಪ್ರತಿಭಾ ಪುರಸ್ಕಾರ ನೀಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement