ಶಿವಮೊಗ್ಗದಲ್ಲಿ ರು. 32 ಕೋಟಿ ರಾಜಸ್ವ ಸಂಗ್ರಹ
ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ 2012-13ನೇ ಸಾಲಿನಲ್ಲಿ ರು. 32 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ಶೇ. 84.65 ಸಾಧನೆ ಸಾಧಿಸಲಾಗಿದೆ ಎಂದು ಹಿರಿಯ ಉಪನೋಂದಣಾಧಿಕಾರಿಗಳು ತಿಳಿಸಿದ್ದಾರೆ. 2007-08ರಲ್ಲಿ ರು. 18 ಕೋಟಿ, 2008-09ರಲ್ಲಿ ರು. 18 ಕೋಟಿ, 2009-10ರಲ್ಲಿ ರು. 25ಕೋಟಿ, 2010-11ರಲ್ಲಿ ರು. 25 ಕೋಟಿ ಹಾಗೂ 2011-12ರಲ್ಲಿ ರು. 29.54 ಕೋಟಿ ರು.ಗಳ ರಾಜಸ್ವ ಸಂಗ್ರಹವಾಗಿತ್ತು ಎಂದವರು ತಿಳಿಸಿದ್ದಾರೆ.