ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಕನ್ನಡಪ್ರಭ-ಎಕ್ಸ್‌ಪ್ರೆಸ್ ಶಿಕ್ಷಣ ಮೇಳ

Lingaraj Badiger
Updated On : 12 Jul 2013, 10:42 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜು.11.  ಪಿಯುಸಿ ನಂತರ ಮುಂದೇನು ಓದಬೇಕು ಎಂಬ ಗೊಂದಲವೇ, ಯಾವ ಕೋರ್ಸ್ ಆರಿಸಿಕೊಂಡರೆ ಮುಂದೆ ಉದ್ಯೋಗ ಸುಲಭವಾಗಿ ಸಿಗುವುದು ಎಂಬ ಅನುಮಾನವೇ, ರಿಸರ್ಚ್ ಕ್ಷೇತ್ರಕ್ಕೆ ರಹದಾರಿ ಯಾವುದೆಂಬ ಪ್ರಶ್ನೆ ಇದೆಯೇ ಎಂಜಿನಿಯರಿಂಗ್, ಮೆಡಿಕಲ್ ಹೊರತಾಗಿ ಬೇರೆ ಯಾವೆಲ್ಲಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದೆಂಬ ಪ್ರಶ್ನೆ ನಿಮ್ಮ ಮುಂದಿದೆಯೇ ಹಾಗಿದ್ದರೆ ಜುಲೈ 13ರ ಶನಿವಾರ ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯ ಒಕ್ಕಲಿಗರ ಸಮುದಾಯ ಭವನಕ್ಕೆ ಬನ್ನಿ. ನಿಮ್ಮ ಪ್ರಶ್ನೆ ಅಥವಾ ಗೊಂದಲಗಳಿಗೆ ತಜ್ಞರು ಉತ್ತರಿಸಲಿದ್ದಾರೆ.
 ಕನ್ನಡಪ್ರಭ ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ 6 ರೀವ್ಸ್ ಸಂಸ್ಥೆ ಶಿಕ್ಷಣ ಮೇಳ ಹಮ್ಮಿಕೊಂಡಿದ್ದು, ಇಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಪ್ರಶ್ನೆಗಳಿಗೆ ಪರಿಹಾರ ಸಿಗಲಿದೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿರುವ 6 ರೀವ್ಸ್ ಸಂಸ್ಥೆಯ ಸಿಇಓ ಕಿರಣ್ ಹಾಗೂ ದಿ ನ್ಯೂಇಂಡಿಯನ್ ಎಕ್ಸ್‌ಪ್ರೆಸ್ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕ ಎಲ್.ಎನ್. ಮೂರ್ತಿ, ಪಿಯುಸಿ ನಂತರ ಮುಂದಿನ ಶಿಕ್ಷಣ ಹಾದಿಯ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಗೊಂದಲ ಹೆಚ್ಚಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಶಿಕ್ಷಣ ಮೇಳ ಆಯೋಜಿಸಿ ಗೊಂದಲಗಳನ್ನು ಸರಿಸಿ ಉತ್ತಮ ದಾರಿ ಹುಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮೇಳದ ಉದ್ದೇಶ: ಪ್ರಸ್ತುತ ಸನ್ನಿವೇಶದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ತಯಾರಿ, ಸೀಟು ಹಂಚಿಕೆ ಪ್ರಕ್ರಿಯೆ ಎಂಬುದು ತಲೆಶೂಲೆಯಾಗಿ ಪರಿಣಮಿಸುತ್ತಿದೆ. ಮಾಹಿತಿಯನ್ನು ಮನನ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ.
ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಪಿಯು ಹಂತದ ವಿದ್ಯಾರ್ಥಿಗಳಿಗೆ ಸಿಇಟಿ, ಸೀಟು ಹಂಚಿಕೆ ಎಂಬುದು ಗೊಂದಲದ ವಿಚಾರ. ಅದೇ ರೀತಿ ಮೆಡಿಕಲ್, ಎಂಜಿನಿಯರಿಂಗ್ ಹೊರತಾಗಿ ಬೇರೆ ಯಾವೆಲ್ಲಾ ಕೋರ್ಸ್ ಸೇರಬಹುದು, ಉದ್ಯೋಗ ಸೃಷ್ಟಿಸುವ ಪ್ರಮುಖ ಕೋರ್ಸ್ ಯಾವುದು, ಸಂಶೋಧನಾ ಕ್ಷೇತ್ರದ ಪ್ರವೇಶ ಹೇಗೆ, ಕೃಷಿ ಕ್ಷೇತ್ರದ ಅಧ್ಯಯನ ಹೇಗೆ, ಅನಿಮೇಷನ್ ಕೋರ್ಸ್ ಪ್ರವೇಶ ಎಲ್ಲಿ ಎಂಬಿತ್ಯಾದಿ ಮಾಹಿತಿ ಕೊರತೆ ಇದ್ದೇ ಇದೆ.
ಬಹುಸಂಖ್ಯೆಯ ಪೋಷಕರೂ ಈ ವಿಚಾರದಲ್ಲಿ ಗೊಂದಲಕ್ಕೆ ಬೀಳುತ್ತಿದ್ದಾರೆ. ಗಾಬರಿಗೊಂಡು ಆತಂಕಿತರಾಗುತ್ತಿದ್ದಾರೆ.
 ಈ ಹಿನ್ನೆಲೆಯಲ್ಲಿ ಸುಲಭವಾಗಿ ಶೈಕ್ಷಣಿಕ ಮಾಹಿತಿ ಪಡೆಯಬಹುದಾದ ಒಂದು ವೇದಿಕೆಯನ್ನು ದಿ ನ್ಯೂಇಂಡಿಯನ್ ಎಕ್ಸ್ ಪ್ರಸ್ ಮತ್ತು ಕನ್ನಡಪ್ರಭ ಸೃಷ್ಟಿಸುತ್ತಿದೆ. ತಜ್ಞರ ತಂಡ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿಗಳನ್ನು ನೀಡಲಿದೆ.
ರಾಜ್ಯದ ಎರಡನೇ ಹಂತದ 15 ಜಿಲ್ಲಾ ಕೇಂದ್ರಗಳಲ್ಲಿ ಈ ರೀತಿ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಶನಿವಾರ ಶಿಕ್ಷಣ ಮೇಳ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement