ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸದನ ಪಾವಿತ್ರ್ಯ ಕಾಪಾಡುವುದು ಎಲ್ಲರ ಕರ್ತವ್ಯ

Rashmi Kasaragodu
Updated On : 12 Jul 2013, 1:30 am

ಸಾಗರ: ಶಾಸನಸಭೆಗೆ ಆಯ್ಕೆಯಾಗಿ ಬರುವವರು ಸದನದ ಪಾವಿತ್ರ್ಯತೆ ಕಾಪಾಡಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಕೀಲರ ಸಂಘ ನೀಡಿದ ಸನ್ಮಾನ ಸ್ವೀಕರಿಸಿ, ವೈಯಕ್ತಿಕ ಪ್ರತಿಷ್ಠೆಗಾಗಿ ಸದನವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ವಿಧಾನಸಭೆ ಎನ್ನುವುದು ಜನರ ಕೈಗನ್ನಡಿ. ಇಲ್ಲಿ ಜನರ ಸಮಸ್ಯೆ ಬಗ್ಗೆ, ಆಶೋತ್ತರಗಳ ಕುರಿತು ಅರ್ಥಪೂರ್ಣ  ಚರ್ಚೆ ನಡೆಯಬೇಕು. ಈ ನಿಟ್ಟಿನಲ್ಲಿ ಆಡಳಿತ ಹಾಗೂ ವಿಪಕ್ಷ ಇಬ್ಬರ ಜವಾಬ್ದಾರಿಯೂ ಇದೆ. ಜನಪ್ರತಿನಿಧಿಯಾದವನು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಆತನ ಆಯ್ಕೆಗೊಂದು ಅರ್ಥ ಸಿಗುತ್ತದೆ ಎಂದರು.
ಪ್ರಾಮಾಣಿಕತೆ: ಸ್ಪೀಕರ್ ಆದವರು ರಾಜಕೀಯ ಚಟುವಟಿಕೆಗಳಿಂದ ದೂರ ಇರಬೇಕು. ನನ್ನ ಅವಧಿಯಲ್ಲಿ ಅದನ್ನು ಪ್ರಾಮಾಣಿಕವಾಗಿ ರೂಢಿಸಿಕೊಂಡು ಬರುತ್ತೇನೆ. ಆಡಳಿತ ಯಂತ್ರ ಕುಸಿದಿದ್ದರಿಂದ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಮಂತ್ರಿಗಳನ್ನು, ಶಾಸಕರನ್ನು ಎಡತಾಕುವಂತೆ ಆಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ನಿಗಾ ವಹಿಸಬೇಕು ಎಂದು ಹೇಳಿದರು. ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಧೀಶರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement