ಹಂದಿ ತೆರವು ಕಾರ್ಯಾಚರಣೆ
ಶಿರಾಳಕೊಪ್ಪ: ಪಟ್ಟಣದಲ್ಲಿ ವಿಪರೀತವಾಗಿದ್ದ ಹಂದಿಕಾಟವನ್ನು ನಿಗ್ರಹ ಮಾಡಲು ಪಪಂ ಮುಂದಾಗಿದ್ದು, ಗುರುವಾರ ಹಂದಿಹಿಡಿಯಲು ಚಾಲನೆ ನೀಡಿದೆ. ಪಪಂ ಮುಖ್ಯಾಧಿಕಾರಿ ರಾಜ್ ಕುಮಾರ್ ಈ ಕುರಿತು ಮಾತನಾಡಿ, ನಾಗರಿಕರ ಆರೋಗ್ಯ ಮತ್ತು ಪಟ್ಟಣದ ಶುಚಿತ್ವ ಕಾಪಾಡಲು ಪಪಂ ಹಂದಿಗಳನ್ನು ತೆರವುಗೊಳಿಸಲು ಮುಂದಾಗಿದೆ. ಹಂದಿಸಾಕಾಣೆದಾರರು ತಕ್ಷಣ ಹಂದಿಗಳನ್ನು ತೆರವುಗೊಳಿಸುವದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಹಂದಿಕಾಟ ಹೆಚ್ಚಾದ ಕಾರಣ ಸಾರ್ವಜನಿಕರು ಹಾಗೂ ಪಪಂ ಸದಸ್ಯರು ಹಂದಿನಿಗ್ರಹ ಮಾಡುವಂತೆ ಬಂದ ಒತ್ತಾಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಹಂದಿ ಸಾಕಾಣೆ ದಾರರು ಪಟ್ಟಣದ ಹೊರವಲದಲ್ಲಿ ಹಂದಿಗಳನ್ನು ಸಾಕುವುದರಿಂದ ನಾಗರಿಕರಿಗೆ ತೊಂದರೆ ಉಂಟಾಗುವದಿಲ್ಲ. ಆದ್ದರಿಂದ ಪಟ್ಟಣದಲ್ಲಿ ಹಂದಿಗಳನ್ನು ತೆರವು ಗೊಳಿಸಲು ಸೂಚಿಸಲಾಗಿದೆ ಎಂದಿದ್ದಾರೆ.