ಇಂದು ಕುಂಡಲಿನಿ ಯೋಗ ತರಬೇತಿ
ಶಿವಮೊಗ್ಗ: ಸಹಜ ಯೋಗ ಕರ್ನಾಟಕ ಕೇಂದ್ರ ಜು.14ರಂದು ರಾಜೇಂದ್ರ ನಗರದಲ್ಲಿರುವ ರೋಟರಿ ಪೂರ್ವ ಪ್ರೌಢಶಾಲೆಯಲ್ಲಿ ಕುಂಡಲಿನಿ ಯೋಗ ತರಬೇತಿ ಶಿಬಿರ ಹಮ್ಮಿಕೊಂಡಿದೆ.
ಶನಿವಾರ ಸುದ್ದಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರದ ರಾಜ್ಯ ಸಂಚಾಲಕಿ ಜಯಲಕ್ಷ್ಮಿ, ಜು.14ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಸಹಜ ಯೋಗ ಧ್ಯಾನ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪರಮಾತ್ಮನು ನಮ್ಮೊಳಗಿದ್ದಾನೆಂಬುದನ್ನು ಎಲ್ಲಾ ಧರ್ಮಗಳು ತಿಳಿಸಿವೆ. ವಾಸ್ತವಿಕವಾಗಿ ನಮ್ಮೆಲ್ಲರಲ್ಲಿಯೂ ಸುಪ್ತ ಸ್ಥಿತಿಯಲ್ಲಿ ಕುಂಡಲಿನಿ ಎಂಬ ದೈವೀಕ ಶಕ್ತಿಯಿದೆ. ಆದರೆ, ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಲು ಮಹಾಸಾಧಕರಲ್ಲಿಯೂ ಅಸಂಭವನೀಯವಾಗಿತ್ತು ಎಂದ ಅವರು, ಪ್ರತಿ ಶನಿವಾರ ಸಂಜೆ 5 ಗಂಟೆಯಿಂದ 8 ಗಂಟೆವರೆಗೆ ನಿರಂತರವಾಗಿ ಕುಂಡಲಿನಿ ಯೋಗ ಕಲಿಸಿಕೊಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಜ ಯೋಗ ಕೇಂದ್ರದ ಜಯಪ್ರಕಾಶ್, ಶಶಿಧರ್, ಸುಮಾ ಮತ್ತಿತರರು ಇದ್ದರು.