ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ಸಾಗುವಾನಿ ನಾಟ ವಶ: ಬಂಧನ

Lingaraj Badiger
Updated On : 15 Jul 2013, 10:42 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.14
ಅಕ್ರಮವಾಗಿ ಸಾಗುವಾನಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲು ಸಮೇತ ಬಂಧಿಸಿದ ಘಟನೆ ಗಾಜನೂರು ಬಳಿ ಭಾನುವಾರ ನಸುಕಿನಲ್ಲಿ ನಡೆದಿದೆ.
ಶಿವಮೊಗ್ಗದ ಶರಾವತಿ ನಗರದ ನಿವಾಸಿ ಕೈಸರ್ ಭಾಷಾ(20)ಬಂಧಿತ ಆರೋಪಿ. ಗಾಜನೂರಿನ ಅರಣ್ಯ ತನಿಖಾ ಠಾಣೆಯ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಎಂದಿನಂತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಅಕ್ರಮವಾಗಿ ಸಾಗುವಾನಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಕೈಸರ್ ಭಾಷಾ ತನಿಖಾ ಠಾಣೆಯ 30 ಮೀ ದೂರದಲ್ಲಿಯೇ ವಾಹನ ನಿಲ್ಲಿಸಿ, ವಾಹನ ಬಿಟ್ಟು ಸ್ನೇಹಿತ ಇಮ್ರಾನ್‌ನೊಂದಿಗೆ ತಪ್ಪಿಸಿಕೊಂಡು ಓಡುತ್ತಿದ್ದರು.
ಇದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಬೆನ್ನುಹತ್ತಿ ಕೈಸರ್ ಭಾಷಾನನ್ನು ಬಂಧಿಸಿದ್ದು, ಇಮ್ರಾನ್ ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾನೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
1 ಲಕ್ಷ ಮೌಲ್ಯದ ನಾಟ: ಸಾಗುವಾನಿಯ 8 ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಸುಮಾರು 1 ಲಕ್ಷ ರುಪಾಯಿಯಾಗಿದೆ. ಇದರೊಂದಿಗೆ ಟಾಟಾ ಸೂಪರ್ ಏಸ್ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್, ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಸಕ್ರೇಬೈಲು ವನ್ಯಜೀವಿ ವಲಯದ ಅರಣ್ಯಾಧಿಕಾರಿ ಕೆ.ಎಂ. ಕೃಷ್ಣೇಗೌಡ ಅವರ ನೇತೃತ್ವದಲ್ಲಿ ವಲಯ ಅಧಿಕಾರಿ ಎ.ಕೆ. ಮಲ್ಲಪ್ಪ, ಕೆ. ಪಾಡುರಂಗ, ಅರಣ್ಯ ರಕ್ಷಕ ಬಿ.ಕೆ. ನಾಗರಾಜ, ಅಬ್ದುಲಲ್ಮಜೀದ್, ಎ. ಶಿವರಾಜ, ಎ. ವರುಣಾಚಾರಿ, ಎಂ.ಆರ್. ಸಿಬ್ಬಂದಿ  ಆರ್. ರಮೇಶ್, ಟಿ. ಪ್ರಕಾಶ್, ಕೆ. ರವಿಕುಮಾರ, ವಾಹನ ಚಾಲಕ ಎಸ್.ಟಿ. ನಾಗರಾಜ ಹಾಗೂ ವಾಚರ್ ರಮೇಶ್ ಮತ್ತಿತರರು ಇದ್ದರು.

80 ಸಾವಿರ ಮೌಲ್ಯದ ಬೀಟೆ ನಾಟಾ ವಶ
ಸಾಗರ: ತಾಲೂಕಿನ ಜಂಬಾನೆ ಗ್ರಾಮದ ಸರ್ವೆ ನಂ.13ರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ನಾಟಾಗಳನ್ನು ವಾಹನ ಸಮೇತ ಅರಣ್ಯ ಇಲಾಖೆಯ ಗಸ್ತುದಳ ಭಾನುವಾರ ಬೆಳಗಿನ ಜಾವ ವಶಪಡಿಸಿಕೊಂಡಿದೆ.
ಜಂಬಾನೆ ಗ್ರಾಮದ ಮೈಸಾವಿ ಮನ್ನಜಂಗ್ಲಿ ಮೀಸಲು ಅರಣ್ಯದ ಬಿಳಿಸಿರಿಯಿಂದ ಜಂಬಾನಿಗೆ ಹೋಗುವ ರಸ್ತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಬೆಳಗಿನಜಾವ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ್ದ ಐಷರ್ ಕ್ಯಾಂಟರ್ ಹಾಗೂ ಡಿಸ್ಕವರಿ ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ನಿಲ್ಲಸದೆ ಮುಂದೆ ಚಲಿಸಿದಾಗ, ಅರಣ್ಯ ಇಲಾಖೆ ಸಿಬ್ಬಂದಿ ಜೀಪಿನಲ್ಲಿ ಬೆನ್ನತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಫಾಲೋ ಮಾಡುತ್ತಿರುವುದನ್ನು ಗಮನಿಸಿದ ಮರಗಳ್ಳರು ವಾಹನವನ್ನು ಬಿಟ್ಟು ಕಾಡಿನಲ್ಲಿ ಪರಾರಿಯಾಗಿದ್ದಾರೆ.
ಕ್ಯಾಂಟರ್‌ನಲ್ಲಿ ಸುಮಾರು 80 ಸಾವಿರ ಮೌಲ್ಯದ 5 ಬೀಟೆ ತುಂಡು ಸಿಕ್ಕಿದ್ದು, ವಾಹನ ಸೇರಿದಂತೆ ವಶಪಡಿಸಿಕೊಳ್ಳಲಾದ ಒಟ್ಟು ಮೌಲ್ಯ ಸುಮಾರು 3 ಲಕ್ಷ ಎಂದು ಅಂದಾಜಿಸಲಾಗಿದೆ.  ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ವೈ. ಅನಂತಮೂರ್ತಿ, ನೀಲಕಂಠಪ್ಪ, ಅರಣ್ಯ ರಕ್ಷಕರಾದ ನೇಮಿನಾಥ್, ಹಾಲೇಶ್, ಮಲ್ಲಪ್ಪ ಕೇದಾರಿ, ಸುರೇಂದ್ರ ಹಾಗೂ ವಾಹನ ಚಾಲಕ ಲೋಕೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement