'ಸಾಧಕರನ್ನು ಗುರುತಿಸಿ ಗೌರವಿಸುವುದು ಎಲ್ಲರ ಜವಾಬ್ದಾರಿ'
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.14
ಪ್ರಾಣದ ಹಂಗನ್ನು ತೊರೆದು ಇನ್ನೂಬ್ಬರ ಕಷ್ಟದಲ್ಲಿ ಭಾಗಿಯಾಗಿ ಕೈಲಾದ ಮಟ್ಟದಲ್ಲಿ ಸೇವೆ ಸಲ್ಲಿಸಿ ಪ್ರಾಮಾಣಿಕತೆ ಮೆರೆದ ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ರೋಟರಿಯ ಮಾಜಿ ರಾಜ್ಯಪಾಲ ಎಚ್.ಎಲ್. ರವಿ ಹೇಳಿದರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಇತ್ತಿಚೆಗೆ ಉತ್ತರಾಖಂಡ ಜಲ ಪ್ರಳಯದ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಹಿಂದಿರುಗಿ ಬಂದ ನಗರದ ವಿಪತ್ತು ನಿರ್ವಹಣ ತಂಡದ ಸದಸ್ಯ ಡಾ. ವಿ.ಎಲ್.ಎಸ್. ಕುಮಾರ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ವಿ.ಎಲ್.ಎಸ್. ಕುಮಾರ್, ನಮ್ಮಿಂದ ನಾವು ವಿನಾಶ ಹೊಂದುತ್ತಿದ್ದೇವೆ. ನಾವು ಭೂಮಿ ಮೇಲೆ ನಿರಂತರವಾಗಿ ಮಾಡುತ್ತಿರುವ ವಿನಾಶ ಹಾಗೂ ದಬ್ಬಾಳಿಕೆಯಿಂದ ಪರಿಸರ ನಾಶವಾಗುವುದಲ್ಲದೇ ಅದರೊಂದಿಗೆ ನಾವು ನಾಶವಾಗುತ್ತಿದ್ದೇವೆ.
ಉತ್ತರಾಖಂಡದ ರೋಚಕ ಅನುಭವಗಳನ್ನು ಪ್ರಾತ್ಯಕ್ಷಿಕೆ ಮೂಖಾಂತರ ತೋರಿಸಿ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್, ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ವಿಜಯಕುಮಾರ್, ಕಾರ್ಯದರ್ಶಿ ಬಿ. ಪ್ರಸನ್ನಕುಮಾರ್, ಇನ್ನರ್ವೀಲ್ ಅಧ್ಯಕ್ಷೆ ಸುಜಯ ಪುರುಷೋತ್ತಮ್, ಕಾರ್ಯದರ್ಶಿ ಶ್ವೇತಾ ಅಶಿತ್ ಮತ್ತಿತರರು ಇದ್ದರು.
--