ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಬಾಲಕ- ಬಾಲಕಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ ರು. 44,500 ಮೀರಿರಬಾರದು. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಶಾಲಾ-ಕಾಲೇಜಿನ ಮುಖ್ಯೋಪಾಧ್ಯಾಯರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 30ರೊಳಗಾಗಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವಿದ್ಯಾರ್ಥಿಗಳ ಕಳೆದ ಸಾಲಿನ ಅಂಕಪಟ್ಟಿ, ಅನುದಾನ ರಹಿತ ಶಾಲಾ-ಕಾಲೇಜಿನ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಅರ್ಜಿಯನ್ನು ದೃಢೀಕರಿಸಿ ಸಲ್ಲಿಸುವಂತೆ ಶಿಕಾರಿಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಯುಪಡೆ ನೇಮಕಾತಿ ರ್ಯಾಲಿ
ಶಿವಮೊಗ್ಗ: ಭಾರತೀಯ ವಾಯುಪಡೆಯು ಗ್ರೂಪ್ ಎಕ್ಸ್ ವಿಭಾಗದ ತಾಂತ್ರಿಕ ಹುದ್ದೆ ಭರ್ತಿಗಾಗಿ ಬೃಹತ್ ನೇಮಕಾತಿ ರ್ಯಾಲಿಯನ್ನು ಜು. 31ರಂದು ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣ (ಬ್ಯಾಡ್ಮಿಂಟನ್ ಸ್ಫೋಟ್ಸ್ ರ್ ಕೋರ್ಟ್)ದಲ್ಲಿ ಹಮ್ಮಿಕೊಂಡಿದೆ. ರಾಜ್ಯದ ಅವಿವಾಹಿತ ಪುರುಷ, 1 ಮೇ 1993ರಿಂದ 30 ನವೆಂಬರ್ 1996ರ ನಡುವೆ ಜನಿಸಿರುವ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ದ್ವಿತೀಯ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಶೇ.50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಹಾಗೂ ಪ್ರತ್ಯೇಕವಾಗಿ ಇಂಗ್ಲಿಷ್ನಲ್ಲಿ 50ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಅಥವಾ 3 ವರ್ಷಗಳ ಡಿಪ್ಲೋಮಾದಲ್ಲಿ ಶೇ.50ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಎಲ್ಲಾ ಮೂಲ ಅಂಕಪಟ್ಟಿಗಳೊಂದಿಗೆ (ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ ಅಥವಾ ಡಿಪ್ಲೋಮಾ) ಮತ್ತು ಅವುಗಳ ಮೂರು ಛಾಯಾ ಪ್ರತಿಗಳನ್ನು ಹಾಗೂ ಇತ್ತೀಚಿನ 7 ಪಾಸ್ಪೋರ್ಟ್ ಅಳತೆಯ ಕಲರ್ ಭಾವಚಿತ್ರಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹಾಜರಾಗತಕ್ಕದ್ದು. ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್ಸೈಟ್ ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ.್ಝಟಿ ಅಥವಾ ಇ-ಮೇಲ್ -್ಛ್ಟ7ಛಡ್ಛಣಜಛಡಿಛ್ಟಟಿಜ.್ಝಟಿ ಅಥವಾ ದೂರವಾಣಿ ಸಂಖ್ಯೆ. 082-25592199 ಅಥವಾ ಖುದ್ದಾಗಿ ನಂ.2, ಏರ್ಮೆನ್ ಕಲೆಕ್ಷನ್ ಸೆಂಟರ್, ನಂ.1, ಕಬ್ಬನ್ ರಸ್ತೆ, ಬೆಂಗಳೂರು, ಇಲ್ಲಿಗೆ ಸಂಪರ್ಕಿಸಬಹುದು.
ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕಾರ ನೀಡಿ
ಶಿವಮೊಗ್ಗ: ಮಕ್ಕಳಿಗೆ ಸರಿಯಾದ ಸಮಯದಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಸಂಸ್ಕಾರ ಸಿಕ್ಕಾಗ ಪರಿಪೂರ್ಣ ವಿದ್ಯಾರ್ಥಿಯಾಗುತ್ತಾನೆ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ನೂತನ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್ ಅಭಿಪ್ರಾಯಪಟ್ಟರು. ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಬಡಮಕ್ಕಳಿಗೆ ನೋಟ್ ಪುಸ್ತಕ, ಶಬ್ದಕೋಶ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಇಂಟರ್ಯಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ. ವಿಜಯ ಕುಮಾರ, ಪ್ರತಿಭೆಯಾರಲ್ಲಿ ಹೇಗಿರುತ್ತೆ ಅನ್ನುವುದು ತಿಳಿದಿರುವುದಿಲ್ಲ. ಅದನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಂಘ ಸಂಸ್ಥೆಯವರು ಮಾಡಬೇಕು ಎಂದರು.
ಇನ್ನರ್ವೀಲ್ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ಸುಜಯ ಪುರುಷೋತ್ತಮ, ಬಡ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿದರು. ಇಂಟರ್ಯಾಕ್ಟ್ಕ್ಲಬ್ಗೆ ನೂತನ ಅಧ್ಯಕ್ಷರಾಗಿ ಅರ್ಪಿತ ಮತ್ತು ಕಾರ್ಯದರ್ಶಿಯಾಗಿ ಗೋವಿಂದ ತಮ್ಮ ತಂಡದೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯದರ್ಶಿ ಬಿ. ಪ್ರಸನ್ನ ಕುಮಾರ್, ಪ್ರತಾಪ್, ಮುಕುಂದೇ ಗೌಡ, ಶ್ವೇತ ಅಶಿತ್, ಮೀನಾ ಕುಮಾರಿ, ಪ್ರಶಾಂತ್, ಡಾ. ರವಿಕಿರಣ್ ಉಪಸ್ಥಿತರಿದ್ದರು.