ಟಾಟಾ ಏಸ್ಗೆ ಲಾರಿ ಡಿಕ್ಕಿ; ವ್ಯಕ್ತಿ ಸಾವು
ಶಿವಮೊಗ್ಗ: ಲಾರಿಯೊಂದು ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತ್ಯಾವರೆಕೊಪ್ಪ ಬಳಿ ನಡೆದಿದೆ. ಸಿದ್ದಪ್ಪ ಮೃತಪಟ್ಟವರು. ಲಾರಿ ಚಾಲಕ ಶಶಿಕುಮಾರ್ ಅಜಾಗರೂಕತೆಯಿಂದ ಲಾರಿ ಚಲಾಯಿಸಿಕೊಂಡು ಬಂದು ಎದುರು ಬರುತ್ತಿದ್ದ ಟಾಟಾ ಏಸ್ಗೆ ಡಿಕ್ಕಿ ಹೊಡೆದಿದ್ದಾರೆ. ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ.
ಪೆನ್ಷನ್ ಅದಾಲತ್
ಭದ್ರಾವತಿ: ಭದ್ರಾವತಿ ತಾಲೂಕು ಕೂಡ್ಲಿಗೆರೆ ಹೋಬಳಿಯ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿನ ಸಾಮಾಜಿಕ ಭದ್ರತಾ ಯೋಜನೆಯಡಿಯ ವೇತನಗಳ ಮಂಜೂರಾತಿ ಕೋರಿಕೆ ಅರ್ಜಿ ಸ್ವೀಕರಿಸಲಾಗುವುದು. ಈ ಮೊದಲು ವೇತನ ಮಂಜೂರಾಗಿದ್ದು ಅದು ನಿಲುಗಡೆಯಾಗಿದ್ದಲ್ಲಿ ಅಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಜು.27ರಂದು ಕೂಡ್ಲಿಗೆರೆ ನಾಡ ಕಚೇರಿಯಲ್ಲಿ ನಡೆಯುವ ಪೆನ್ಷನ್ ಅದಾಲತ್ನಲ್ಲಿ ಸ್ವೀಕರಿಸಲಾಗುವುದು ಎಂದು ಉಪ ತಹಸೀಲ್ದಾರ್ ಮೈಲಾರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯಲ್ಲಿನ ಅಂತರಗಂಗೆ, ಅರಳಿಹಳ್ಳಿ, ಅತ್ತಿಗುಂದ, ದೊಡ್ಡೇರಿ, ಯರೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳು ಅರ್ಜಿ ಸಲ್ಲಿಸಿ ಅಗತ್ಯವಿರುವ ದಾಖಲಾತಿ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.