ಶಿವಮೊಗ್ಗ ಜಿಲ್ಲೆ ಪಡಿತರ ಬಿಡುಗಡೆ
ಶಿವಮೊಗ್ಗ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜುಲೈ ತಿಂಗಳಿಗೆ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ ರು. 1 ದರದಲ್ಲಿ ಒಂದು ಯೂನಿಟ್‌ಗೆ 10 ಕೆ.ಜಿ ಅಕ್ಕಿ, 2 ಯೂನಿಟ್‌ಗೆ 20 ಕೆ.ಜಿ ಅಕ್ಕಿ, 3 ಯೂನಿಟ್ ಮತ್ತು ಮೇಲ್ಪಟ್ಟ ಸದಸ್ಯರನ್ನು ಹೊಂದಿರುವವರಿಗೆ 30ಕೆ.ಜಿ ಅಕ್ಕಿಯನ್ನು ಜಿಲ್ಲೆಯ ಅಂತ್ಯೋದಯ ಪಡಿತರ ಚೀಟಿದಾರರಿಗೆ ರು. 1ರಂತೆ 29 ಕೆ.ಜಿ. ಅಕ್ಕಿ ಮತ್ತು 2 ರುಪಾಯಿನಂತೆ 6 ಕೆ.ಜಿ. ಗೋಧಿ ವಿತರಿಸಲಾಗುವುದು.
ಅಡಿಗೆ ಅನಿಲ ಸಂಪರ್ಕ ರಹಿತ ಶಿವಮೊಗ್ಗ ಮತ್ತು ಭದ್ರಾವತಿಯ ಪಡಿತರದಾರರಿಗೆ 5ಲೀ, ಪಟ್ಟಣ ಪ್ರದೇಶದವರಿಗೆ 5ಲೀ ಮತ್ತು ಗ್ರಾಮಾಂತರ ಪ್ರದೇಶದವರಿಗೆ 5ಲೀ ಸೀಮೆಎಣ್ಣೆ ವಿತರಿಸಲಾಗುತ್ತಿದ್ದು, ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ ಮತ್ತು ಭದ್ರಾವತಿಗಳಲ್ಲಿ ರು. 16.20, ಸಾಗರ ರು. 16, ತೀರ್ಥಹಳ್ಳಿ ಮತ್ತು ್ಡಹೊಸನಗರ ಪಟ್ಟಣದಲ್ಲಿ ರು. 15.90 ಹಾಗೂ ಗ್ರಾಮಾಂತರ ಪ್ರದೇಶ ಶಿವಮೊಗ್ಗ, ಶಿಕಾರಿಪುರ ಹಾಗೂ ಸೊರಬ ರು. 16.60, ಭದ್ರಾವತಿ ರು. 16.70, ಎಲ್ಲಾ ಪಡಿತರ ಚೀಟಿದಾರರಿಗೆ ವಿತರಿಸಲಾಗುವುದು.
ದೂರು ಸಲ್ಲಿಸಬಹುದು: ಪಡಿತರ ವಿತರಣೆ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಸಹಾಯವಾಣಿಗೆ ದೂರು ಸಲ್ಲಿಸಬಹುದು. ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿವಮೊಗ್ಗ- 08182-222203, ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಶಿವಮೊಗ್ಗ- 08182-250110, ಸಹಾಯಕ ನಿರ್ದೇಶಕರು, ಅನೌಪಚಾರಿಕ ಪಡಿತರ ಪ್ರದೇಶ, ಭದ್ರಾವತಿ- 08282-263444,ತಹಸೀಲ್ದಾರ್ ಕಚೇರಿ, ಶಿವಮೊಗ್ಗ- 08182-277045, ತಹಸೀಲ್ದಾರ್ ಕಚೇರಿ, ಭದ್ರಾವತಿ -08282-265144, ತಹಸೀಲ್ದಾರ್ ಕಚೇರಿ, ಸಾಗರ-08183-220031, ತಹಶೀಲ್ದಾರ್ ಕಚೇರಿ, ಆಹಾರ ವಿಭಾಗ -ಶಿಕಾರಿಪುರ -08187-222058, ತಹಸೀಲ್ದಾರ್ ಕಚೇರಿ, ತೀರ್ಥಹಳ್ಳಿ- 08181-220160, ತಹಸೀಲ್ದಾರ್ ಕಚೇರಿ, ಸೊರಬ -08184-272466, ತಹಸೀಲ್ದಾರ್ ಕಚೇರಿ, ಹೊಸನಗರ -08185-221115 ಇಲ್ಲಿಗೆ ಸಂಪರ್ಕಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.