ವಂಚನೆ: ಆರೋಪ
ಶಿವಮೊಗ್ಗ: ಷೇರು ವ್ಯವಹಾರದಲ್ಲಿ ತೊಡಗಿಸಿದ್ದ ಹಣ ಹಾಗೂ ಲಾಭಾಂಶದ ಮೊತ್ತ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಖಾಸಗಿ ವ್ಯವಹಾರ ಸಂಸ್ಥೆಯ ವ್ಯವಸ್ಥಾಪಕರ ವಿರುದ್ಧ ಜಯನಗರ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಅಶ್ವಥನಗರದ ನಿವಾಸಿ ಗಣೇಶ್ ತಂತ್ರಿ ಅವರು ಐಟಿಐ ಫೈನಾನ್ಸಿಯಲ್ ಸರ್ವಿಸ್ ಲಿಮಿಡೆಡ್ ವ್ಯವಸ್ಥಾಪಕ ಎಚ್.ಎಂ. ಮೋಹನ್ ನಾಯ್ಕ್ ಅವರ ವಿರುದ್ಧ ದೂರು ನೀಡಿದ್ದು, ಮೋಹನ್ ನಾಯ್ಕ್ ಅವರು 2010ರಲ್ಲಿ ಗಣೇಶ್ ತಂತ್ರಿ ಅವರಿಂದ ರು. 2 ಲಕ್ಷ ಪಡೆದು ಸಂಸ್ಥೆಯ ಷೇರುಗಳಲ್ಲಿ ತೊಡಗಿಸುವುದಾಗಿ ತಿಳಿಸಿದ್ದರು. ಆದರೆ, ಇಲ್ಲಿಯವರೆಗೆ ತಮಗೆ ಷೇರಿನ ಲಾಭಾಂಶದ ಮೊತ್ತ ಹಾಗೂ ಷೇರಿನ ಹಣವನ್ನು ನೀಡಿಲ್ಲ ಎಂದು ಗಣೇಶ್ ತಂತ್ರಿ ಆರೋಪಿಸಿದ್ದಾರೆ. ಪ್ರಕರಣ ಜಯನಗರ ಠಾಣೆಯಲ್ಲಿ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.