20ರಂದು ನೇತ್ರ ತಪಾಸಣಾ ಶಿಬಿರ
ಶಿವಮೊಗ್ಗ: ಗಾಂಧಿನಗರದ ಗುರುಕಣ್ಣಿನ ಆಸ್ಪತ್ರೆಯಲ್ಲಿ ಜುಲೈ 20ರಂದು ಬೆಳಿಗ್ಗೆ 8ಗಂಟೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಬೆಳಿಗ್ಗೆ 10ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಆಸ್ಪತ್ರೆಯ ಡಾ. ಎಚ್.ವಿ. ಗಿರಿಸ್ವಾಮಿ ರಸ್ತಾಪುರಮಠ ತಿಳಿಸಿದ್ದಾರೆ. ಮೊ. 08182-270647.
21ರಂದು ಸಂವಾದ
ಶಿವಮೊಗ್ಗ: ಶಿವಮೊಗ್ಗ ಮಿಡ್ಟೌನ್ ರೋಟರಿ ಡಯಾಬಿಟಿಕ್ ಸೆಲ್ಫ್ಕೇರ್ ಫೌಂಡೇಶನ್ ಆಶ್ರಯದಲ್ಲಿ ಜು.21ರಂದು ರೋಟರಿ ರಕ್ತ ನಿಧಿ ಸಭಾಂಗಣದಲ್ಲಿ ಬೆಳಿಗ್ಗೆ 11ಗಂಟೆಯಿಂದ ಮಧುಮೇಹಕ್ಕೆ ಸಂಬಂಧಿಸಿದ ಮಧುಮೇಹದಿಂದ ಮೂತ್ರಪಿಂಡಗಳ ಮೇಲಾಗುವ ಪರಿಣಾಮಗಳ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂತ್ರಪಿಂಡ ರೋಗದ ವೈದ್ಯ ಡಾ.ಎ.ಎಸ್. ದಯಾನಂದ್ ಸಂವಾದದಲ್ಲಿ ಪಾಲ್ಗೊಳ್ಳುವರು. ಸಂವಾದದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಫೌಂಡೇಶನ್ ಕಾರ್ಯದರ್ಶಿ ಜಿ.ಎನ್.ಎನ್. ಮೂರ್ತಿ ತಿಳಿಸಿದ್ದಾರೆ.
ಬಹುಮಾನ ಪ್ರದಾನ
ಶಿವಮೊಗ್ಗ: ಕರ್ನಾಟಕ ಸಂಘ ಜುಲೈ 20ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ 2012ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ಎಸ್.ವಿ. ತಿಮ್ಯಯ್ಯ ಅಧ್ಯಕ್ಷತೆ ವಹಿಸುವರು ಎಂದು ಡಾ. ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ.
--