ತರಬೇತಿ ಕಾರ್ಯಾಗಾರ
ಶಿವಮೊಗ್ಗ: ಸ್ಪಂದನ ಚಾನೆಲ್ ಜು.20ರಿಂದ ವಿಶೇಷ ತರಬೇತಿ ಕಾರ್ಯಗಾರ ಆಯೋಜಿಸಿದೆ. ಟಿವಿಯಲ್ಲಿ ಸುದ್ದಿ ಓದುವುದು, ಕಾರ್ಯಕ್ರಮ ನಿರೂಪಣೆ ಮತ್ತಿತರ ವಿಷಯಗಳ ಬಗ್ಗೆ ಪ್ರಾಥಮಿಕ ತರಬೇತಿ ನೀಡಲಾಗುವುದು, ಕಾರ್ಯಾಗಾರವು 20ರಿಂದ ಹತ್ತು ದಿನಗಳ ಕಾಲವಿದ್ದು, ಪ್ರತಿನಿತ್ಯ ಬೆಳಿಗ್ಗೆ 8ರಿಂದ 9ಗಂಟೆವರೆಗೆ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. ಸ್ಟುಡಿಯೋದಲ್ಲಿ ಕ್ಯಾಮೆರಾ ಎದುರಿಸುವುದು ಹೇಗೆ, ಟೆಲಿಪ್ರಾಂಪ್ಟರ್ ಓದುವುದು ಹೇಗೆ, ಸುದ್ದಿಯನ್ನು ಓದುವ ಬಗೆ, ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ವಿದ್ಯಾಭ್ಯಾಸ ಮುಗಿಸಿರುವ 20-30 ವರ್ಷದೊಳಗಿನ ವಿದ್ಯಾರ್ಥಿಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ವಿವರಗಳಿಗಾಗಿ- 08182- 224477.