ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳೇ ಪೊಲೀಸ್ ಭೀತಿ ಬೇಡ: ಜೈರಾಜ್

Lingaraj Badiger
Updated On : 19 Jul 2013, 11:25 am

ಶಿವಮೊಗ್ಗ: ಪೊಲೀಸ್ ಠಾಣೆ ಎಂದರೆ ಸಾಕು ಕನಸ್ಸಿನಲ್ಲೂ ಭಯ ಬೀಳುವ ಕಾಲದಲ್ಲಿ ಮಕ್ಕಳನ್ನು ಠಾಣೆಗೆ ಕರೆಸಿ ಮಾಹಿತಿ ನೀಡುವುದು ಎಂದರೆ ತಮಾಷೆಯ ಮಾತಲ್ಲ.
 ಆಶ್ಚರ್ಯ ಎನಿಸಿದರೂ ಇದು ಸತ್ಯ. ಇಂತಹದೊಂದು ಪ್ರಯತ್ನವನ್ನು ನಗರದ ಕೋಟೆ ಠಾಣೆ ಪೊಲೀಸರು ಗುರುವಾರ ಮಾಡಿದ್ದು, ನಗರದ ಮಹಾವೀರ ಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಮಕ್ಕಳೊಂದಿಗೆ ಸಂವಾದ ಮಾಡಿದರು.
ಅನಗತ್ಯ ಭಯ: ಈ ವೇಳೆ ಮಾತನಾಡಿದ ಠಾಣೆಯ ಇನ್‌ಸ್ಪೆಕ್ಟರ್ ಜೈರಾಜ್, ಚಲನಚಿತ್ರ ಹಾಗೂ ಟಿವಿಗಳಲ್ಲಿ ಬರುವ ಕೆಲ ಕಾರ್ಯಕ್ರಮಗಳಲ್ಲಿ ಪೊಲೀಸರನ್ನು ನಕಾರಾತ್ಮಕವಾಗಿ ಬಿಂಬಿಸುತ್ತಾರೆ. ಆದರೆ, ವಾಸ್ತವದಲ್ಲಿ ಪೊಲೀಸರು ಆ ರೀತಿ ಇರುವುದಿಲ್ಲ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.
 ಚಲನಚಿತ್ರ, ಟಿ.ವಿ ಪ್ರಭಾವ ಹಾಗೂ ಮತ್ತಿತರ ಕಾರಣಗಳಿಂದ ಸಾಮಾನ್ಯವಾಗಿ ಪೊಲೀಸ್ ಎಂದರೆ ಕೆಟ್ಟವರು ಎಂಬ ಭಾವನೆ ಹುಟ್ಟುಹಾಕಿದ್ದಾರೆ. ಮಕ್ಕಳಲ್ಲಿರುವ ಇಂತಹ ಭಾವನೆ ಹೋಗಬೇಕು ಎಂಬ ಉದ್ದೇಶದಿಂದಲೇ ಇಲಾಖೆಯು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ನೇರವಾಗಿ ಮಾತನಾಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ದುಶ್ಚಟಗಳಿಗೆ ಬಲಿಯಾಗಬೇಡಿ: ಪೊಲೀಸರು ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತಾರೆ. ತಮಗೆ ಆದ ಅನ್ಯಾಯದ ವಿರುದ್ಧ ಯಾರು ಬೇಕಾದರೆ ಠಾಣೆಗೆ ದೂರು ನೀಡಬಹುದು ಎಂದ ಅವರು, ಇಂದಿನ ಮಕ್ಕಳೆ ಭವಿಷ್ಯದ ಪ್ರಜೆಗಳು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
 ಈ ವೇಳೆ ಎಸ್‌ಐ ಶ್ರೀಶೈಲ ಕುಮಾರ್, ತೀರ್ಥಪ್ಪ, ಎಎಸ್‌ಐ ಲಕ್ಷ್ಮಣ್, ಜಯಣ್ಣ, ಪೇದೆ ಸುನೀಲ್, ಪ್ರಕಾಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement