ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ
ಶಿವಮೊಗ್ಗ: ನಗರದ ಜಗನ್ನಾಥ್ ನರ್ಸಿಂಗ್ ಹೋಂ ಡೆಕ್ಸಾ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಜು.21ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ಗಂಟೆವರೆಗೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಡೆಕ್ಸಾ ಯಂತ್ರದಿಂದ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸೊಂಟ, ಭುಜ, ಕುತ್ತಿಗೆ ಅಥವಾ ಬೆನ್ನು ನೋವಿನ ತೊಂದರೆಗೆ ಒಳಗಾದವರು. 40 ವರ್ಷ ಮೇಲ್ಪಟ್ಟ ಪುರುಷರು, ಋತುಸ್ರಾವ ನಿಂತಿರುವ ಎಲ್ಲಾ ಮಹಿಳೆಯರು, ಗರ್ಭಕೋಶ ಚಿಕಿತ್ಸೆಗೆ ಒಳಗಾದವರು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಆರ್ಥೈಟಿಸ್, ಸ್ತೂಲ ಕಾರ್ಯ ಮತ್ತಿತರ ರೋಗಗಳಿಂದ ನರಳುತ್ತಿರುವವರು ಮೂಳೆ ಸಾಂದ್ರತೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಸೆಂಟರ್‌ನ ಎ.ಆರ್. ಜಯಪ್ರಕಾಶಶ್ತಿಳಿಸಿದ್ದಾರೆ. ವಿವರಗಳಿಗಾಗಿ- 9448149872.
ಉಚಿತ ಆರೋಗ್ಯ ತಪಾಸಣೆ
ಶಿವಮೊಗ್ಗ: ಗಾಂಧಿ ಬಜಾರ್‌ನ ಚಂದನಶ್ರೀ ಸಂಸ್ಥೆ ಜು.21ರಂದು ಬೆಳಿಗ್ಗೆ 11ಗಂಟೆಗೆ ಹನಸವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಏರ್ಪಡಿಸಿದೆ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಗ್ರಾಮಾಂತರ ಶಾಸಕಿ ಶಾರದಪೂರ್ಯನಾಯ್ಕ, ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್. ರಮೇಶ್, ಸಮಾಜದ ಮುಖಂಡ ಅಜಿತತ್ಪಿ. ದಿನಕರ್, ಚಂದನಶ್ರೀ ಸಂಸ್ಥೆಯ ಅಧ್ಯಕ್ಷ ಕೆ. ಬಸವರಾಜ್, ಉಪಾಧ್ಯಕ್ಷ ವಿನೋದ್‌ಕುಮಾರ್ ಜೈನ್, ಹನಸವಾಡಿ ಗ್ರಾಮದ ಮುಖಂಡ ಬಸವರಾಜಪ್ಪ ಮತ್ತಿತರರು ಇದ್ದರು.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಜಿಲ್ಲಾ ರಿಯಲ್ ಎಸ್ಟೇಟ್ ಏಜೆಂಟರ ಸಂಘದ ಪ್ರಸಕ್ತ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಮೋಹನ್, ಅಧ್ಯಕ್ಷ ಕೆ. ಗಣೇಶ್ಕಾಶಿಪುರ, ಉಪಾಧ್ಯಕ್ಷರಾಗಿ ಪಿ. ರಾಜು(ಗೊಲ್ಲ), ಶಿವಶಂಕರ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಎನ್.ಟಿ. ಸುರೇಶ, ಕಾರ್ಯಾಧ್ಯಕ್ಷ ಟಿ. ಸೋಮಶೇಖರ್, ಸಹಕಾರ್ಯದರ್ಶಿ ಜಿ. ಕುಮಾರ, ಗೌರವ ಸಲಹೆಗಾರ ಡ್ಯಾನಿಯಲ್ ಬಾಬು, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ಉಮೇಶ್, ಆರ್. ಲೋಕೇಶ ಹಾಗೂ ನಿರ್ದೇಶಕರಾಗಿ ಡಿ. ಶ್ರೀನಿವಾಸ(ವಾಸು), ಎಚ್. ರಾಜಶೇಖರ, ಜಿ.ಎನ್. ಶಿವಕುಮಾರ, ದಿವಾಕರ, ಎಲೆರಾಜಣ್ಣ, ಎಂ. ಗಣೇಶರಾವ್, ಭಾಸ್ಕರ, ಡಿ. ದೀಪಕ್, ಕೆ. ಕುಮಾರ, ಕೆ.ಆರ್. ನಿರಂಜನ, ಲೋಹಿತ್‌ಕುಮಾರ್, ಸಂಜಯ್ ಅವರು ನೇಮಕಗೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಗಣೇಶ್ ಕಾಶಿಪುರ ತಿಳಿಸಿದ್ದಾರೆ.