ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂಜನಾಪುರ ಜಲಾಶಯ ಪರಿಶೀಲನೆ

Vishwanath S
Updated On : 21 Jul 2013, 1:24 am

ಕ.ಪ್ರ.ವಾರ್ತೆ , ಶಿಕಾರಿಪುರ , ಜು.20
ತಾಲೂಕಿನ ಬಹು ದೊಡ್ಡ ಅಂಜನಾಪುರ ಜಲಾಶಯದ ಮಣ್ಣಿನ ಏರಿಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ತೀಚೆಗೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಸಂಪೂರ್ಣ ಮಾಹಿತಿ ಪಡೆದು, ನೀರು ಪೋಲಾಗದಂತೆ ಜತೆಗೆ ಹಾನಿಯುಂಟಾಗದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು.
ಜಲಾಶಯವು ಕೃಷಿ ಹಾಗೂ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣದ ಜನತೆಗೆ ವರ್ಷಪೂರ್ತಿ ಕುಡಿಯುವ ನೀರಿನ ಸೆಲೆಯಾಗಿದೆ. ಇಂತಹ  ಜಲಾಶಯದ ಎಡದಂಡೆ ಕಾಲುವೆಯ ಏರಿಯಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿತು.
ನೀರು ಬಿಡುಗಡೆ: ಕೂಡಲೇ ಎಚ್ಚೆತ್ತುಕೊಂಡ ನೀರಾವರಿ ಇಲಾಖೆಯ ಅಧಿಕಾರಿಗಳು ಗೋಡ್ಬೊಲೆ ಗೇಟ್‌ನಲ್ಲಿನ ಕೆಲ ಗೇಟ್‌ಗಳನ್ನು ತೆಗೆದು ಅಧಿಕ ಪ್ರಮಾಣದ ನೀರನ್ನು ಹೊರಹಾಕಿ ನೀರಿನ ಒತ್ತಡವನ್ನು ಕಡಿಮೆಗೊಳಿಸಿದರು.
ಸ್ಥಳಕ್ಕೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರ ಎ.ಎಸ್.ಪಾಟೀಲ್, ಸೂಪರಿಟೆಂಡೆಂಟ್ ಎಂಜಿನಿಯರ್ ಪಾಣಿ ರಾಜು, ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿದ್ರಾಮಪ್ಪ ಮತ್ತಿತರ ತಂಡ  ಮಣ್ಣಿನ ಏರಿಯ ಬಿರುಕಿನ ಮೂಲಕ ನೀರು ಎಡದಂಡೆ ನಾಲಾ ಸೇರುತ್ತಿರುವ ಸ್ಥಳವನ್ನು ಸಂಪೂರ್ಣ ವೀಕ್ಷಿಸಿ ಕೂಡಲೇ ಮರಳು, ಕಲ್ಲುಪುಡಿಯ ಚೀಲದಿಂದ ಸೋರಿಕೆ ನೀರು ಸ್ಥಗಿತಗೊಳಿಸಲು ಸೂಚಿಸಿ ತಾತ್ಕಾಲಿಕವಾಗಿ ಜಲಾಶಯದ ನೀರಿನ ಮಟ್ಟವನ್ನು 19 ಅಡಿ ಕಾಪಾಡಿಕೊಳ್ಳಲು ತಿಳಿಸಿದರು.
ಅಪಾಯ ಇಲ್ಲ: ಇದೀಗ ಮಣ್ಣಿನ ಏರಿ ಒಡೆಯುವ ಅಪಾಯವಿಲ್ಲ. ನೀರಿನ ಒತ್ತಡ ಕಡಿಮೆಯಾದ ತಕ್ಷಣ ನೀರು ಸೋರುತ್ತಿರುವ ಸ್ಥಳದಲ್ಲಿನ ಸಿಮೆಂಟ್ ಪೈಪ್ ಬಳಿ ಕಾಂಕ್ರೀಟ್ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಸ್ಥಳೀಯ ಎಇಇ ಚಂದ್ರಶೇಖರ್ ಸುಲೇಪೇಟ್ಕರ್, ಮಂಜುನಾಥ್, ರಾಮಪ್ಪ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement