ನಾಟಕ ರಂಗವನ್ನು ಉಳಿಸಿಕೊಳ್ಳುವ ಅಗತ್ಯವಿದೆ: ಬೆಳವಾಡಿ
ಶಿವಮೊಗ್ಗ: ಪತ್ರಿಕೋದ್ಯಮವನ್ನು ಪರೀಕ್ಷೆಗೆ ಒಳಪಡಿಸಬೇಕಿದ್ದು, ಈ ಕ್ಷೇತ್ರ ಕೆರಿಯರ್ ಅಲ್ಲ ಎಂದು ಗೊತ್ತಿದಿದ್ದರೂ ಇದೇ ಕ್ಷೇತ್ರವನ್ನು ಹಲವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರಂಗ ನಿರ್ದೇಶಕ ಹಾಗೂ ಪತ್ರಕರ್ತ ಪ್ರಕಾಶ್ ಬೆಳವಾಡಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು, ಓದುಗರು ಪತ್ರಿಕೆಗಳನ್ನು ಖರೀದಿಸುವುದು ಜಾಹೀರಾತಿಗಾಗಿ ಅಲ್ಲ. ಆದರೆ, ಜಾಹೀರಾತುದಾರರಿಗೆ ಬೇಕಾಗಿರುವುದನ್ನು ಸುದ್ದಿ ಮಾಡಬೇಕಿದೆ. ಪ್ರಸ್ತುತ ಸುದ್ದಿ ಸಾಮರ್ಥ್ಯದ ಪ್ರಶ್ನೆಯಾಗಿಲ್ಲ. ಆದರೂ ಇದರಲ್ಲಿ ಮೇಲುಗೈ ಯಾರು ಸಾಧಿಸಿದ್ದಾರೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ ಎಂದರು.
ಚಲನಚಿತ್ರ ರಂಗ ಕುಗ್ಗಿದೆ. ಮೇಲೇಳುವ ಸೂಚನೆಗಳೂ ಕಾಣುತ್ತಿಲ್ಲ. ಹೊಸ ರಂಗಭೂಮಿ, ಚಲನಚಿತ್ರ, ಪತ್ರಿಕೋದ್ಯಮ ಬಂದರೂ ಈಗ ಸಂಕಷ್ಟ ಎದುರಾಗಿದೆ. ರಂಗಭೂಮಿ ನಾಟಕ ರಂಗವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಆದರೆ, ಇಂದು ನಿರ್ದೇಶಕರಿಗೆ ಮಾಹಿತಿ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಜೇಸುದಾಸ್, ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ, ರಾಜ್ಯ ಸಮಿತಿ ಕಾರ್ಯದರ್ಶಿ ಮಂಜುನಾಥ್ ಇದ್ದರು.