ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಹಣಿ ವಿತರಣೆ ಸಮಸ್ಯೆ ಪರಿಹರಿಸಿ

Vishwanath S
Updated On : 21 Jul 2013, 1:23 am

ಭದ್ರಾವತಿ: ತಾಲೂಕು ಕಚೇರಿಯಲ್ಲಿ ರೈತರಿಗೆ ಪಹಣಿ ವಿತರಣೆಯಲ್ಲಿ ತೀವ್ರ ಸಮಸ್ಯೆಯುಂಟಾಗಿದ್ದು ಅದನ್ನು ಪರಿಹರಿಸಲು ಭಾರತೀಯ ಜನತಾ ಪಕ್ಷದ ಭದ್ರಾವತಿ ಘಟಕ ತಹಸೀಲ್ದಾರ್ ಸಿದ್ದಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿತು.
 ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕ್ ಹಾಗೂ ಸೊಸೈಟಿಗಳು ಸೇರಿದಂತೆ ಇತರ ಕಡೆಗಳಲ್ಲಿ ರೈತರಿಗೆ ಸಾಲ ನೀಡುವಾಗ ರೈತರ ಜಮೀನಿನ ಪಹಣಿ ಮತ್ತು ಮ್ಯುಟೇಶನ್ ಪತ್ರಗಳು ಅತ್ಯವಶ್ಯಕ. ಇವುಗಳನ್ನು ಪಡೆಯಬೇಕಾದರೆ ರೈತರು ತಾಲೂಕು ಕಚೇರಿಯಲ್ಲಿ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಎಂದು ತಿಳಿಸಿದ್ದಾರೆ.
 ತಾಲೂಕು ಕಚೇರಿಯಲ್ಲಿ ವಿದ್ಯುತ್ ಜನರೇಟರ್ ಅಳವಡಿಸಿ ಪಹಣಿ ನೀಡುವ ಸಮಯವನ್ನು ವಿಸ್ತರಿಸಬೇಕು ಹಾಗೂ ಪಹಣಿ ನೀಡಲು ಮತ್ತೊಂದು ಕೌಂಟರ್ ತೆರೆಯಬೇಕು. ಅವರುಗಳು ತಮ್ಮ ದಾಖಲೆಗಾಗಿ ಪಟ್ಟಣಕ್ಕೆ ಬರಬೇಕಾಗಿದೆ. ಇದನ್ನು ತುರ್ತಾಗಿ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಭದ್ರಾವತಿ ನಗರ ಘಟಕದ ಅಧ್ಯಕ್ಷ ಎಂ. ಮಂಜುನಾಥ್ ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಮಯದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎನ್. ರಮೇಶ್, ಅರಳಿಹಳ್ಲಿ ಪ್ರಕಾಶ್, ಜಿಲ್ಲಾ ಮುಖಂಡ ಶಿವಾಜಿರಾವ್ ಸಿಂಧ್ಯಾ, ನಿಕಟತಮ ಪೂರ್ವಾಧ್ಯಕ್ಷ ಎಂ.ಎಸ್. ಸುರೇಶಪ್ಪ, ಬಿ.ಕೆ.ಶ್ರೀನಾಥ್, ಬಿ.ಜಿ. ರಾಮಲಿಂಗಯ್ಯ, ನಗರಸಭಾ ಸದಸ್ಯ ಜಿ. ಆನಂದಕುಮಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement