ಸಂಚಿ ಹೊನ್ನಮ್ಮ ಶಾಲೆಯಲ್ಲಿ ಚುನಾವಣೆ
ಭದ್ರಾವತಿ: 2013-18ನೇ ಅವಧಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ಶಾಖೆಗೆ ನಿರ್ದೇಶಕರ ಆಯ್ಕೆಯ ಚುನಾವಣೆ ಪಟ್ಟಣದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಆರು ಕ್ಷೇತ್ರಗಳ 12 ಸ್ಥಾನಗಳಿಗೆ ಮತದಾನ ನಡೆಯುವುದು ಎಂದು ಚುನಾವಣಾಧಿಕಾರಿ ಮೈಲಾರಯ್ಯ ತಿಳಿಸಿದ್ದಾರೆ.
ಮತದಾನವು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿದ್ದು ಮತದಾರರು ತಮ್ಮನ್ನು ಗುರುತಿಸಲು ಅನುಕೂಲವಾಗುವಂತೆ ತಮ್ಮ ಇಲಾಖೆಯಿಂದ ನೀಡಿದ ಗುರುತಿನ ಚೀಟಿ ಅಥವಾ ಪಾನ್ ಕಾರ್ಡ್ ಅಥವಾ ಅಂಗವಿಕಲರಾಗಿದ್ದಲ್ಲಿ ಈ ಸಂಬಂಧ ನೀಡಲಾಗಿರುವ ಗುರುತಿನ ಚೀಟಿ ಅಥವಾ ತಮ್ಮನ್ನು ಗುರುತಿಸಬಹುದಾದ ಇನ್ನಾವುದೇ ಇಲಾಖೆಯಿಂದ ನೀಡಲ್ಪಟ್ಟ ದಾಖಲಾತಿಯನ್ನು ತಪ್ಪದೇ ತರಬೇಕೆಂದು ಸಹ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.