ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಹಣದ ಬದಲು ನೈತಿಕತೆ ಉಳಿಸಿಕೊಳ್ಳಿ'

Vishwanath S
Updated On : 21 Jul 2013, 1:24 am

ಕ.ಪ್ರ.ವಾರ್ತೆ , ಶಿವಮೊಗ್ಗ ,  ಜು.20
ಹಣದ ಮೌಲ್ಯ ತಲೆಮಾರಿನಿಂದ ತಲೆ ಮಾರಿಗೆ ಕಡಿಮೆಯಾಗುತ್ತದೆ. ಆದ್ದರಿಂದ ಹಣದ ಸಂಗ್ರಹದ ಬದಲು ನೈತಿಕತೆಯನ್ನು ಉಳಿಸಿಕೊಳ್ಳುವುದು ಒಳ್ಳೆಯದು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶನಿವಾರ ಸಂಘಧ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಹಾರದಲ್ಲಿ ನೈತಿಕತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಅಧಿಕಾರ ಕ್ಷಣಿಕ: ಹಣಕ್ಕಿಂತ ಮೌಲ್ಯ ಹೆಚ್ಚುವ ವಸ್ತು ಇಲ್ಲವೇ ಸಂಗತಿಗಳನ್ನು ಸಂಗ್ರಹಿಸಬೇಕು. ಧರ್ಮ, ಸತ್ಯ ಇವುಗಳ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಹಣ ಬಲ, ತೋಳ್ಬಲ, ಅಧಿಕಾರ ಇವೆಲ್ಲವೂ ಕ್ಷಣಿಕ. ಧರ್ಮದ ಹಿಂದೆ ಹೋದ ಹರಿಶ್ಚಂದ್ರ ಎಲ್ಲವನ್ನೂ ತ್ಯಾಗ ಮಾಡಿದ ಬಳಿಕ ಜನರ ಮನಸ್ಸಿನಲ್ಲಿ ಕೊನೆವರೆಗೆ ಉಳಿದಿದ್ದಾನೆ ಹಾಗೂ ಸತ್ಯವನ್ನು ಪ್ರತಿಪಾದಿಸಿದ ಗಾಂಧಿಜೀ ಕೂಡ ಅಮರರಾಗಿದ್ದಾರೆ ಎಂದು ತಿಳಿಸಿದರು.
ವ್ಯಾಪಾರದಲ್ಲಿ ನೈತಿಕತೆಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಪ್ರಾಮಾಣಿಕತೆ ಇಲ್ಲದಿದ್ದರೆ ವ್ಯವಹಾರದಲ್ಲಿ ಸೋಲು ನಿಶ್ಚಿತ. ಈ ಹಿನ್ನೆಲೆಯಲ್ಲಿ ಗುಜರಾತಿಗಳ ವೃತ್ತಿ ನೈಪುಣ್ಯ ಹಾಗೂ ಪ್ರಾಮಾಣಿಕತೆ ಅನುಕರಣೀಯ. ಅವರು ಹಣ ಗಳಿಕೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗುತ್ತಾರೆ ಎಂದು ತಿಳಿಸಿದರು.
ಪುರಸ್ಕಾರ: ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಎಚ್. ಮಹೇಂದ್ರಪ್ಪ, ವಾಸುದೇವ್, ದೇವದಾಸ ನಾಯಕ್, ಯು. ಮದುಸೂಧನ ಐತಾಳ್, ಬಿ.ಟಿ. ರುದ್ರೇಶ್ಮ್‌ತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement