ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ
ಸಾಗರ: ಇಲ್ಲಿನ ತಾಲೂಕು ಸರ್ಕಾರಿ ನೌಕರರ ಸಂಘಕ್ಕೆ ಸೋಮವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಸಾಂಖ್ಯಿಕ ಹಾಗೂ ಆಹಾರ ನಾಗರಿಕ ಸರಬರಾಜು, ಕಂದಾಯ ಇಲಾಖೆಯಿಂದ ಪುಟ್ಟರಾಜಗೌಡ, ಬಸವರಾಜ ಜಿ., ಮಂಜುನಾಥ ಎಲ್., ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಚಂದ್ರಶೇಖರ್, ನಾಗರಾಜ್ ಚುನಾಯಿತರಾಗಿದ್ದಾರೆ.
ಪ್ರೌಢಶಾಲೆಗಳ ವಿಭಾಗದಿಂದ ಕೆ.ವಿ. ಮಹೇಶ್, ಕಿರಿಯ ಕಾಲೇಜು ಮತ್ತು ಪದವಿಕಾಲೇಜು ವಿಭಾಗದಿಂದ ಪರಮೇಶ್ವರಪ್ಪ ಜಿ., ಅರಣ್ಯ ಇಲಾಖೆಯಿಂದ ನಾಗಭೂಷಣ ಎಚ್.ಆರ್., ತಾಲೂಕು ಪಂಚಾಯ್ತಿಯಿಂದ. ಪಂಡಿತಾರಾಧ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರೋಗ್ಯಾಧಿಕಾರಿಗಳ ಕಚೇರಿ, ಕೆಎಫ್ಡಿ ಹಾಗೂ ಗ್ರಾಮಾಂತರ ಆರೋಗ್ಯ ಕೇಂದ್ರ ವಿಭಾಗದಿಂದ ಸವಿತಾ., ಸುರೇಶ್., ಪ್ರಾಥಮಿಕ ಶಾಲೆಗಳು ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಿಂದ ಡಿ. ಗಣಪತಪ್ಪ, ಜಗನ್ನಾಥ್, ಟಿ.ಜಿ. ಹುಚ್ಚರಾಯಪ್ಪ ಚುನಾಯಿತರಾಗಿದ್ದಾರೆ. ಚುನಾವಣೆ ಮುಖ್ಯ ಅಧಿಕಾರಿಯಾಗಿ ಎಂ.ರಾಮಪ್ಪ ಕಾರ್ಯನಿರ್ವಹಿಸಿದ್ದರು.