ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆ ಕಾರ್ಗಿಲ್ ವಿಜಯದಿವಸ್ ಆಚರಣೆ

Lingaraj Badiger
Updated On : 25 Jul 2013, 11:16 am

ಶಿವಮೊಗ್ಗ: ವಾಸವಿ ವಿದ್ಯಾಲಯ ಮತ್ತು ಸಂಸ್ಕಾರ ಭಾರತೀ ಆಶ್ರಯದಲ್ಲಿ ಜುಲೈ 26ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಸಂಜೆ 5.30ಕ್ಕೆ ಕಾರ್ಗಿಲ್ ವಿಜಯದಿವಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.
 ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಾಸವಿ ಶಾಲೆಯ ಕಾರ್ಯದರ್ಶಿ ಶೇಷಾಚಲ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಸ್. ಕುಮಾರ್, ಸಂದೀಪ್ ಉನ್ನಿಕೃಷ್ಣನ್ ತಂದೆ ಉನ್ನಿಕೃಷ್ಣನ್ ದಂಪತಿಗಳು, ಮಿಲಿಟರಿಯಲ್ಲಿ ಸೇವೆಸಲ್ಲಿಸುತ್ತಿರುವ ನಗರದ ಗಿರೀಶ್ ಶರ್ಮಾ, ರಾಮಚಂದ್ರ, ರಘುನಾಥ್, ಗೀತಾ ಶೆಟ್ಟಿ, ಮೇಜರ್ ವಿಕ್ರಂ ಹಾಗೂ ವಾಸವಿ ವಿದ್ಯಾಲಯದ ಅಧ್ಯಕ್ಷ ಭೂಪಾಳಂ ಎನ್. ಸತ್ಯನಾರಾಯಣ್ ಮತ್ತಿತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
 ಕಾರ್ಗಿಲ್ ಯುದ್ಧದಲ್ಲಿ ಪ್ರಾಣತೆತ್ತ ಯೋಧರ ಗೌರವ ಸಮರ್ಪಣೆಗಾಗಿ ಸಮಾರಂಭ ಆಯೋಜಿಸಲಾಗಿದ್ದು, ಯೋಧರ ಕುಟುಂಬದವರಿಗೆ ಸನ್ಮಾನ ಹಾಗೂ ಗೌರವ ಸಮರ್ಪಣಾ ದಿನವನ್ನಾಗಿ ಕೂಡಾ ಆಚರಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಮುಂಬೈನಲ್ಲಿ ಉಗ್ರಗಾಮಿಗಳ ದಾಳಿಯಿಂದ ನಿಧನ ಹೊಂದಿದ ಸಂದೀಪ್ ಉನ್ನಿಕೃಷ್ಣನ್ ಅವರ ಪೋಷಕರು  ಉನ್ನಿಕೃಷ್ಣನ್, ಬೆಳಗಾಂ ಜಿಲ್ಲೆಯ ಸವಿತ್ರಿ ದೇವಿ, ಲಕ್ಷ್ಮೀ ಮಸ್ಕೆ, ಮಹಾದೇವಿ ಚೌಕಳೆ ಸೇರಿದಂತೆ ಹತ್ತು ಯೋಧ ಕುಟುಂಬದವರ್ಗದವರನ್ನು ಸನ್ಮಾನಿಸಲಾಗುವುದು ಎಂದರು.
 ಎನ್‌ಸಿಸಿ ವಿಭಾಗದ 400 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 10 ಕಲಾತಂಡಗಳು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಸಿಕೊಡಲಿವೆ ಎಂದರು.
 ಮಕ್ಕಳಲ್ಲಿ ಜಾಗೃತಿ ಮೂಡಿಸಿ, ದೇಶಪ್ರೇಮ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಸಾಮಾನ್ಯ ಜೀವನದಲ್ಲಿ ಯೋಧರ ಪಾತ್ರವೇನು. ಅವರ ಜೀವನ ಶೈಲಿ ಮತ್ತಿತರ ಹಲವಾರು ವಿಚಾರಗಳ ಮೇಲೆ ಕಾರ್ಯಕ್ರಮ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
 ಸುದ್ದಿಗೋಷ್ಠಿಯಲ್ಲಿ ಸಂಸ್ಕಾರ ಭಾರತಿಯ ಜಿಲ್ಲಾ ಪ್ರಧಾನ ವೆಂಕಟರಾಮ, ಜಿಲ್ಲಾ ಸಂಚಾಲಕ ಎಸ್.ವಿ. ಭರತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement