ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ದುರ್ಗದಲ್ಲಿ ಶಿಕ್ಷಣ ಮೇಳ

Lingaraj Badiger
Updated On : 26 Jul 2013, 11:35 am

ಕ.ಪ್ರ.ವಾರ್ತೆ  ಚಿತ್ರದುರ್ಗ  ಜು.25
ಪಿಯು ಶಿಕ್ಷಣ ನಂತರ ಮುಂದೇನು ಎಂಬ ಗೊಂದಲ ವಿದ್ಯಾರ್ಥಿಗಳು- ಪೋಷಕರ ಸರ್ವಕಾಲಿಕ ಸಮಸ್ಯೆ. ಎಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಹೊರತಾಗಿ ಬೇರೆ ಶಿಕ್ಷಣ ಮಾರ್ಗಗಳೇ ಇಲ್ಲ ಎಂಬುದು ಕೆಲವರ ಏಕಮಾರ್ಗ. ಇಂತಹ ಸನ್ನಿವೇಶದಲ್ಲಿ ಪಿಯು ನಂತರ ಮುಂದೆ ಏನೆಲ್ಲಾ ಓದಬಹುದು, ಎಂಜಿನಿಯರಿಂಗ್-ಮೆಡಿಕಲ್ ಪ್ರವೇಶಕ್ಕೆ ಯಾವ ರೀತಿ ಪ್ರಯತ್ನ ಮಾಡಬೇಕಾಗುತ್ತದೆ, ಪ್ರಕ್ರಿಯೆ ಹೇಗಿರುತ್ತದೆ ಎಂಬ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಕನ್ನಡಪ್ರಭ-  ದಿ ನ್ಯೂ ಇಂಡಿಯನ್‌ಎಕ್ಸ್‌ಪ್ರೆಸ್, ಸಿಕ್ಸ್‌ರೀವ್ಸ್ ಸಂಸ್ಥೆಯ ಜತೆಗೂಡಿ ಶಿಕ್ಷಣ ಮೇಳ ಹಮ್ಮಿಕೊಂಡಿದೆ.
ಚಿತ್ರದುರ್ಗದಲ್ಲಿ ಇಂತಹ ಮೇಳ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಶನಿವಾರ ಡೆಂಟಲ್ ಕಾಲೇಜು ಆವರಣದ ಎಸ್‌ಜೆಎಂ ಸಮುದಾಯ ಭವನದಲ್ಲಿ ಮೇಳ ಆಯೋಜನೆಗೊಂಡಿದ್ದು, ಸಂಸದ ಜನಾರ್ದನ ಸ್ವಾಮಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮುರುಘಾ ಮಠದ ಡಾ. ಶಿವಮೂರ್ತಿ ಮುರಘಾ ಶರಣರು ಸಾನ್ನಿಧ್ಯ ವಹಿಸುವರು.
ನಂತರ ವಿವಿಧ ತಾಂತ್ರಿಕ ಗೋಷ್ಠಿಗಳು ನಡೆಯಲಿದ್ದು, ತಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ.
ಎಸ್‌ಜೆಎಂ ಸಮೂಹ ಸಂಸ್ಥೆ, ಲಿಟ್ಲ್‌ಫೇರಿಸ್ ರೆಸಿಡೆನ್ಸಿಯಲ್ ಅಂಡ್ ಇಂಟರ್ ನ್ಯಾಷನಲ್ ಸ್ಕೂಲ್, ವಿದ್ಯಾ ವಿಕಾಸ ಸಮೂಹ ಸಂಸ್ಥೆ, ಬಾಪೂಜಿ ಸಮೂಹ ಸಂಸ್ಥೆ, ಪ್ರಗತಿ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್, ತೋಟಗಾರಿಕೆ ಇಲಾಖೆ, ಮಣಿಪಾಲ ಸೆಂಟರ್ ಫಾರ್ ಅನಿಮೇಷನ್ ಹಾಗೂ ಎಸ್‌ಐ ಇನ್ಫೋಟೆಕ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪಾಲ್ಗೊಳ್ಳುತ್ತಿವೆ.
ಮೇಳದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಕ್ಸ್‌ರೀವ್ಸ್ ಎಂಡಿ ಎಸ್.ಯುವರಾಜ್, ಸಾಮಾಜಿಕ ಕಳಕಳಿಯೊಂದಿಗೆ ಮೇಳ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಕಡೆ ನಡೆದ ಮೇಳದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗದ ವಿದ್ಯಾರ್ಥಿಗಳು ಮೇಳದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಾಂಸ್ಕೃತಿಕ ನಗರಿ ಮೈಸೂರಿನಿಂದ ಈ ಶಿಕ್ಷಣ ಮೇಳ ಆರಂಭವಾಗಿದ್ದು, ನಂತರ ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಪ್ರತಿ ಮೇಳದಲ್ಲಿ ಸರಾಸರಿ ಒಂದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮೇಳದ ಪ್ರಯೋಜನ ಪಡೆದುಕೊಂಡಿದ್ದಾರೆ. ತಮ್ಮಲ್ಲಿರುವ ಬಹುವಿಧದ ಗೊಂದಲಗಳನ್ನು ಪರಿಹರಿಸಿಕೊಂಡಿದ್ದಾರೆ ಎಂದು ಯುವರಾಜ್ ತಿಳಿಸಿದರು.

ಅಪರೂಪದ ಛಾಯಾಚಿತ್ರ ಪ್ರದರ್ಶನ
ಈ ಶಿಕ್ಷಣ ಮೇಳದ ಮತ್ತೊಂದು ವಿಶೇಷವೆಂದರೆ, ಹಿರಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಅವರು ಸೆರೆ ಹಿಡಿದಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವಿರುತ್ತದೆ.
   ಹಲವು ದಶಕಗಳಿಂದ ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಅಪರೂಪದ ಕ್ಷಣಗಳನ್ನು ಅವರು ಇಲ್ಲಿ ಬಿತ್ತರಿಸಲಿದ್ದಾರೆ. ಜೊತೆಗೆ ಫೋಟೋ ಜರ್ನಲಿಸಂ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement