ಜೂಜು ಅಡ್ಡೆಗಳ ಮೇಲೆ ದಾಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.25
ಎರಡು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಸುಮಾರು 74 ಜನರನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ದೂರುಗಳ ಅನ್ವಯ ಗುರುವಾರ ಸಂಜೆ ನಗರದ ನೆಹರೂ ರಸ್ತೆಯ ದೇವರಾಜ ಅರಸು ಕಾಂಪ್ಲೆಕ್ಸ್ನಲ್ಲಿರುವ ಗಾಡ್ ಗಿಫ್ಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು 58 ಜನರನ್ನು ಬಂಧಿಸಿದ್ದು, 45,900 ರು. ವಶಕ್ಕೆ ಪಡೆದಿದ್ದಾರೆ. ಕಳೆದೊಂದು ವಾರದಲ್ಲಿ ಈ ಕ್ಲಬ್ ಮೇಲೆ 2ನೇ ಬಾರಿ ಪೊಲೀಸರ ದಾಳಿ ನಡೆದಿದೆ.
ಕಾರ್ಮಿಕರ ಕ್ಷೇಮಾಭಿವೃದ್ಧಿ ಮನೋರಂಜನಾ ಕೇಂದ್ರದ ಮೇಲೆಯೂ ಪೊಲೀಸರು ದಾಳಿ ನಡೆಸಿ 16 ಜನರನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 65,700 ರು. ವಶವಾಗಿದೆ. ಕೋಟೆ ಠಾಣೆ ಸಿಪಿಐ ಜಯರಾಜ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.