ನೌಕರರ ಸಂಘದ ಅಧ್ಯಕ್ಷರ ಆಯ್ಕೆ
ಸಾಗರ: ಇಲ್ಲಿನ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಆರ್.ನಾಗಭೂಷಣ್, ಖಜಾಂಚಿಯಾಗಿ ವಿಜಯಕುಮಾರ್ ಹಾಗೂ ರಾಜ್ಯ ಪರಿಷತ್ತು ಸದಸ್ಯರಾಗಿ ಮ.ಸ.ನಂಜುಂಡಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಪದಾಧಿಕಾರಿಗಳ ಚುನಾವಣೆಗೆ ಈ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಮಾತನಾಡಿದ ರಾಜ್ಯ ಪರಿಷತ್ತು ಸದಸ್ಯ ಮ.ಸ. ನಂಜುಂಡಸ್ವಾಮಿ, ನೌಕರರ ಸಮಸ್ಯೆಗೆ ಸ್ಪಂದಿಸುವ ಜೊತೆಗೆ ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಮನೋಸ್ಥಿತಿ ವೃದ್ಧಿಯಾಗಬೇಕು. ಸಂಘಟನೆ ಸದೃಢವಾಗಿದ್ದಾಗ ಮಾತ್ರ ನಮ್ಮ ಹಕ್ಕು ದೊರಕಿಸಿಕೊಳ್ಳುವ ಹೋರಾಟಕ್ಕೆ ಶಕ್ತಿ ಬರುತ್ತದೆ ಎಂದರು. ನೂತನ ಅಧ್ಯಕ್ಷನಾಗಭೂಷಣ್ ಮಾತನಾಡಿದರು. ಚುನಾವಣಾಧಿಕಾರಿ ರಾಮಪ್ಪ, ಮಂಜಪ್ಪ, ನೂತನ ನಿರ್ದೇಶಕ ಮೈಲಪ್ಪ, ಗಣಪತಪ್ಪ, ಬಸವರಾಜ್, ಪುಟ್ಟರಾಜಗೌಡ ಇದ್ದರು.