ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಸ್ಮರಣೆ

Lingaraj Badiger
Updated On : 27 Jul 2013, 10:55 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.26
ದೇಶದ ಗಡಿಯೊಳಗೆ ನುಸುಳಿದ್ದ ಶತ್ರು ಸೈನ್ಯವನ್ನು ಸೆದೆಬಡಿದು ತಾಯ್ನಾಡಿಗಾಗಿ ವೀರ ಮರಣವನ್ನಪಿದ್ದ ಯೋಧ ಹಾಗೂ ಕುಟುಂಬವನ್ನು ಸ್ಮರಿಸುವ ಕ್ಷಣ... ಆ ಕ್ಷಣಕ್ಕಾಗಿ ನೂರಾರು ಮಕ್ಕಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಉಡುಗೆ- ತೊಡುಗೆಗಳನ್ನು ತೊಟ್ಟು ಬಾಗಿಲ ತುದಿಯಲ್ಲಿ ಆ ವೀರ ಯೋಧನ ಬರುವಿಕೆಗಾಗಿ ಕಾಯುತ್ತಿದ್ದ ಕ್ಷಣವದು...
ಇಷ್ಟೆಲ್ಲ ಸಂಗತಿಗಳು ನಡೆದದ್ದು ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ವಾಸವಿ ವಿದ್ಯಾಲಯ ಮತ್ತು ಸಂಸ್ಕಾರ ಭಾರತೀ ಆಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ.
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸುವ ಜೊತೆಗೆ ನಗರದಲ್ಲಿರುವ ಮಾಜಿ ಸೈನಿಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಹೈಲೈಟ್ಸ್:  ಬಲೂನ್‌ಗಳನ್ನೇ ತಮ್ಮ ಶತ್ರಗಳೆಂದು ಭಾವಿಸಿ ಹೊಡೆದು ಉರುಳಿಸಿ ತಮ್ಮ ವಿಜಯದ ದಿವಸ್ ಆಚರಿಸಿದ್ದರು. ಕಾರ್ಗಿಲ್‌ನಿಂದ ತದಂತಹ ಮಣ್ಣನ್ನು ಎಲ್ಲರು ಹಣೆಗೆ ಇಟ್ಟುಕೊಂಡರು. ವಾಸವಿ ಶಾಲೆಯ ಚಿಕ್ಕಮಕ್ಕಳಿಂದ ಹಿಂದೂಸ್ತಾನ್.. ಹಿಂದುಸ್ತಾನ್... ಹಾಡಿನ ನೃತ್ಯ ಕಂಡ ಪ್ರೇಕ್ಷಕಿನಿಂದ ಚಪ್ಪಾಳೆಗಳು ರಂಗಮಂದಿರದಲ್ಲಿ ಸುರಿಮಳೆಗೈದಿದವು.
ಯೇ ಹರ್ಕ್‌ದಮ್.. ಕದಮ್ಕೇ ಹಾಡಿನ ಮೂಲಕ ಎನ್‌ಸಿಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹೇ ಮೇರಿ ವಥನ್‌ಕೇ ಲೊಗೋ ಹಾಡಿನ ನೃತ್ಯದೊಂದಿಗೆ ಗಣ್ಯರ ಸನ್ಮಾನ ಹಾಗೂ ಮೇಣದಬತ್ತಿ ಹಿಡಿದು ಕಾರ್ಗಿಲಲ್ ಯುದ್ಧದಲ್ಲಿ ಮಡಿದ ಯೋಧನಿಗೆ ವಂದನೆ ಸಲ್ಲಿಸಲಾಯಿತು. ಭಾವನ ಜೂನಿಯರ್ ಜಸಿಎಸ್ ಮತ್ತು ಶ್ರೀ ಕೃಷ್ಣ ಸಂಸ್ಥೆ ಮಕ್ಕಳಿಂದ ನಾವು ಭಾರತೀಯರು.. ಎಂಬ ಹಾಡು, ಸೈನ್ಯದಲ್ಲಿ ಮಡಿದ ವೀರ ಯೋಧನ ಸ್ಮರಣೆಗಾಗಿ ಸೈನಿಕ ನೃತ್ಯ, ವಂದೇ ಮಾತರಂ ಚಿತ್ರದ ಹಿಂದುಸ್ತಾನ್ ಗೊತ್ತೆನ್ನೂ ಧರ್ಮ ಕಾಯೋ ಹಿಮಾಲಯ.. ದಿಕ್ಕು, ದಿಕ್ಕಾಲಿ ಭಾವ್ ಬಂಧನ್... ಹಾಡಿನ ನೃತ್ಯಗಳು ರಂಗಮಂದಿರದಲ್ಲಿ ಸೇರಿದವರಲ್ಲಿ ದೇಶಭಕ್ತಿ ಝೇಂಕರಿಸಿತು. ಅದರೊಂದಿಗೆ ಸಂಸ್ಕಾರ ಭಾರತೀ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಹಾಗೂ ಜೈ ಹೋ ಹಾಡಿಗೆ ಪ್ರೇಕ್ಷಕ ಮನಸೋತಿದ್ದೊಂತು ಸುಳ್ಳಲ್ಲ.  
ಸನ್ಮಾನ: ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಬೆಳಗಾಂನ ಅಥಣಿಯ ಬಸಪ್ಪ ಕಲ್ಲಪ್ಪ ಚೌಗಲೆ ಅವರ ತಮ್ಮ ಮಲ್ಲಪ್ಪ ಚೌಗಲೆ, ಸಂದೀಪ್ ಉನ್ನಿಕೃಷ್ಣನ್ ತಂದೆ,ತಾಯಿ, ಮಿಲಿಟರಿಯಲ್ಲಿ ಸೇವೆಸಲ್ಲಿಸುತ್ತಿರುವ ನಗರದ ಕರ್ನಲ್ ಗಿರೀಶ್ ಶರ್ಮಾ, ಕರ್ನಲ್ ರಾಮಚಂದ್ರ, ಕರ್ನಲ್ ರಘುನಾಥ್, ಲೆಫ್ಟಿನೆಟ್ ಕರ್ನಲ್ ಗೀತಾ ಶೆಟ್ಟಿ, ಮೇಜರ್ ವಿಕ್ರಂ, ಬೆಳಗಾಂ ಜಿಲ್ಲೆಯ ಸವಿತ್ರಿ ದೇವಿ, ಲಕ್ಷ್ಮೀ ಮಸ್ಕೆ ಅವರನ್ನು ಸನ್ಮಾನಿಸಲಾಯಿತು.  
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಲ್ ರಘುನಾಥ್, ನಾನು ಸೈನ್ಯದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದೆ. ಸೈನ್ಯದಲ್ಲಿ ಹೋರಾಟ ಮಾಡಿ ಗಾಯಗೊಂಡ ಆ ವೀರ ಯೋಧನನ್ನು ಚಿಕಿತ್ಸೆ ಮಾಡುವಾಗಿ ರೋಚಕ ಅನುಭವ ಆಗುತ್ತಿತ್ತು ಎಂದರು.ಕರ್ನಲ್ ರಾಮಚಂದ್ರ ಮಾತನಾಡಿ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಒಂದು ಒಳ್ಳೆಯ ಒಪ್ಪಂದ ಆಗಿತ್ತು. ಸೆಪ್ಟೆಂಬರ್‌ನಿಂದ ಏಪ್ರಿಲ್ ವರೆಗೆ ದೇಶದ ಗಡಿ ಭಾಗದಲ್ಲಿ ಯಾವ ದೇಶದ ಸೈನಿಕನು ಬರುವಂತಿಲ್ಲ ಎಂಬ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ, ಪಾಕಿಸ್ತಾನದ ಸೈನಿಕರು ಒಪ್ಪಂದ ಮುರಿದು ಗಡಿ ಪ್ರದೇಶವನ್ನು ಪ್ರವೇಶ ಮಾಡಿದ್ದರಿಂದಲೇ ಕಾರ್ಗಿಲ್ ಯುದ್ಧ ನಡೆಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕುಮಾರ್, ವಾಸವಿ ವಿದ್ಯಾಲಯದ ಅಧ್ಯಕ್ಷ ಭೂಪಾಳಂ ಎನ್. ಸತ್ಯನಾರಾಯಣ್, ವಾಸವಿ ಶಾಲೆಯ ಕಾರ್ಯದರ್ಶಿ ಶೇಷಾಚಲ, ಸಂಸ್ಕಾರ ಭಾರತಿಯ ಜಿಲ್ಲಾ ಪ್ರಧಾನ ವೆಂಕಟರಾಮ, ಭರತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement