ಗೌರಿ ಹಳ್ಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜು.26
ಸತತ ಸುರಿಯುತ್ತಿರುವ ಮಳೆಯಿಂದ ಶಿಕಾರಿಪುರ- ಶಿರಾಳಕೊಪ್ಪ ಮಧ್ಯೆ ಇರುವ ಗೌರಿ ಹಳ್ಳಕ್ಕೆ ಪ್ರವಾಹ ಬರುವ ಸಂಭವವಿದ್ದು, ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನಲ್ಲಿ ಹರಿಯುವ ಏಕಮೇವ ನದಿ ಕುಮದ್ವತಿ ನದಿಗೆ ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆ ಆದಾಗ ಕುಮದ್ವತಿ ನದಿಗೆ ಪ್ರವಾಹ ಬರುತ್ತದೆ. ನೀರಿನ ಹರಿವು ಹೆಚ್ಚಾದಾಗ ಕುಮದ್ವತಿ ನದಿ ಮಧ್ಯದಲ್ಲಿ ನುಗ್ಗಿ ಗೌರಿ ಹಳ್ಳಕ್ಕೆ ಪ್ರವಾಹ ಬಂದು ರಸ್ತೆ ಮೇಲೆ ನೀರು ಬರುವುದರಿಂದ ಶಿಕಾರಿಪುರ -ಶಿರಾಳಕೊಪ್ಪ ರಸ್ತೆ ಸಂಚಾರ ಬಂದ್ ಆಗುತ್ತದೆ. ಪ್ರವಾಹ ಬಂದಾಗ ಆ ಭಾಗದ ಕೆಲಪ್ರದೇಶಕ್ಕೆ ನೀರು ನುಗ್ಗಿ ತಾತ್ಕಾಲಿಕವಾಗಿ ಕೃಷಿ ಕಾರ್ಯಕ್ಕೆ ತೊಂದರೆ ಆಗುತ್ತದೆ.
ಹಿಂದೆಯೂ ತೊಂದರೆ: ಈ ಹಿಂದೆ ಮಳೆಗಾಲದಲ್ಲಿ ಮೇಲಿಂದ ಮೇಲೆ ಪ್ರವಾಹ ಬಂದು ಸಂಚಾರಕ್ಕೆ ತೊಂದರೆ ಆಗುತ್ತಿದ್ದುದನ್ನು ಗಮನಿಸಿದ್ದ ಮಾಜಿ ಮುಖ್ಯ ಮಂತ್ರಿ ಬಿಎಸ್ ಡಿಯೂರಪ್ಪ ಮುಖ್ಯಂಮಂತ್ರಿ ಆದಾಗ ಕೋಟ್ಯಂತರ ರೂ ವೆಚ್ಚದಲ್ಲಿ ತಗ್ಗಾಗಿದ್ದ ರಸ್ತೆಯನ್ನು ಎತ್ತರಿಸಿ ರಸ್ತೆ ಮಧ್ಯದಲ್ಲಿ ಸೇತುವೆಯನ್ನು ವಿಸ್ತಾರ ಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಗೊಳಿಸಿದ್ದ ಕಾರಣ ಸಾಮಾನ್ಯ ಮಳೆಗೆ ನೀರು ಬರದಂತಾಗಿದೆ.
ಆದರೆ ನಿರಂತರ ಮಳೆ ಬರುತ್ತಿರುವದ ರಿಂದ ರಸ್ತೆ ಮೇಲೆ ಹಳ್ಳ ಬಂರಬಹದು ಎಂದು ಅನುಮಾನಿಸಲಾಗಿತ್ತು, ಆದರೆ ಈವರೆಗೆ ಪ್ರವಾಹ ಬಂದಿರಲಿಲ್ಲ. ತಾಲೂಕಿನಲ್ಲಿ ಎಲ್ಲಿಯೇ ಪ್ರವಾಹದಿಂದ ತೊಂದರೆ ಆದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದಿದ್ದಾಗಿ ತಿಳಿದಿದೆ.ಸಂಸದ ರಾಘವೇಂದ್ರ ಅವರೊಂದಿಗೆ ಜಿಪಂ ಮಾಜಿ ಸದಸ್ಯ ಭದ್ರಾಪುರ ಹಾಲಪ್ಪ ಸುಖೇಂದ್ರಪ್ಪ, ಪ್ರಮುಖರು ಹಾಜರಿದ್ದರು.