ನರರೋಗ ಚಿಕಿತ್ಸಾ ಶಿಬಿರ
ಶಿವಮೊಗ್ಗ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆ ಮತ್ತು ಸಹ್ಯಾದ್ರಿ ನರ ಮತ್ತು ಮನೋವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಜು. 28ರಂದು ಬೆಳಗ್ಗೆ 9.30ರಿಂದ ಸೊರಬ ತಾಲೂಕು ಆಸ್ಪತ್ರೆಯಲ್ಲಿ ಉಚಿತ ಮಾನಸಿಕ ಆರೋಗ್ಯ ಹಾಗೂ ನರರೋಗ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಶಾಸಕ ಮಧುಬಂಗಾರಪ್ಪ ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ.ಎನ್.ಶಿವಣ್ಣ ರೆಡ್ಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಉಪಸ್ಥಿತರಿರುವರು. ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆ ಅಧ್ಯಕ್ಷ ಹಾಗೂ ಮನೋವೈದ್ಯ ಡಾ.ಕೆ.ಎ.ಅಶೋಕ ಪೈ ಅಧ್ಯಕ್ಷತೆ ವಹಿಸುವರು. ಶಿಬಿರದಲ್ಲಿ ನರರೋಗ ತಜ್ಞ ಡಾ.ಶ್ರೀಧರ್, ಡಾ.ಸಂಜಯ್ ಡಾ. ವಾಮನ್ ಶ್ಯಾನ್ಭೋಗ್, ಡಾ.ಪ್ರಶಾಂತ್ ಇರುವರು.