ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಅಗತ್ಯ

Mainashree
Updated On : 28 Jul 2013, 11:49 am

ಶಿವಮೊಗ್ಗ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಅಗತ್ಯ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.
ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ನಗರದ ಡಿವಿಎಸ್ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಕಾನೂನು ನೆರವು ಮತ್ತು ಅರಿವು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದಲ್ಲಿ ಅವರು, ಕಾನೂನಿನ ಸಾಮಾನ್ಯ ತಿಳಿವಳಿಕೆಯಿಂದ ವ್ಯವಹಾರ ಜ್ಞಾನ ಹೆಚ್ಚಲಿದೆ.
 ಅಲ್ಲದೇ, ತಮ್ಮ ಹಕ್ಕು ಮತ್ತು ಕರ್ತವ್ಯಗಳ ವ್ಯವಸ್ಥಿತ ಬಳಕೆಗೆ ಸಹಕಾರಿಯಾಗಲಿದೆ ಎಂದರು. ಕಾನೂನಿನ ತಿಳುವಳಿಕೆಯಿಂದ ಎಲ್ಲರಿಗೂ ಸಂವಿಧಾನ ಬದ್ದವಾದ ಹಕ್ಕು ಅವಕಾಶಗಳು ದೊರಕಲಿವೆ. ಆದ್ದರಿಂದ ಎಲ್ಲರೂ ಪ್ರಾಥಮಿಕ ಕಾನೂನು ಅರಿವು ಹೊಂದಬೇಕು ಎಂದರು.
 ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಎಂ. ನಂಜುಂಡಸ್ವಾಮಿ, ಕಾನೂನಿನ ಅರಿವು ಇಲ್ಲ ಎನ್ನುವುದು ಪ್ರತಿರಕ್ಷೆಯಾಗುವುದಿಲ್ಲ. ಅದು ಅಪಾಯಕಾರಿಯಾಗಿದೆ. ಅಪೂರ್ಣ ತಿಳುವಳಿಕೆಯಿಂದ ಅಪರಾಧಿಗಳು ಶಿಕ್ಷೆಯಿಂದ ಹೊರಗುಳಿಲು ಸಾಧ್ಯವಿಲ್ಲ ಎಂದರು. ಜನರ ಆಶಯಗಳಿಗೆ ಪೂರಕವಾಗಿ ಕಾನೂನುಗಳನ್ನು ರೂಪಿಸಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ.
 ನಾವೇ ಒಪ್ಪಿಕೊಂಡು ರೂಪಿಸಿದ ಕಾನೂನು ವ್ಯವಸ್ಥೆಯಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ, ಓರ್ವ ನಿರಪರಾಧಿಗೂ ಶಿಕ್ಷೆ ಆಗಬಾರದೆಂಬ ಆಶಯ ನಮ್ಮದಾಗಿದೆ.
 ಪ್ರಸ್ತುತ ದಿನಗಳಲ್ಲಿ 3.2ಕೋಟಿ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ಇತ್ಯರ್ಥವಾಗುವ ಪ್ರಕರಣಗಳಲ್ಲಿ ಶೇ.12-14ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಲಿದೆ ಎಂದ ಅವರು, ಸುಗಮವಾಗಿ ಜೀವನ ಸಾಗಿಸಲು ಕಾನೂನಿನ ಅರಿವು ಅಗತ್ಯ ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಪ್ರಧಾನ ಹಿರಿಯ ಸಿವಿಲ್‌ನ್ಯಾಯಾಧೀಶ ರವಿ ಎಂ. ನಾಯ್ಕ ವಿಶೇಷ ಉಪನ್ಯಾಸ ನೀಡಿದರು.
  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್, ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್. ಮಂಜುನಾಥ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎ.ಟಿ. ಪದ್ಮೇಗೌಡ ಮತ್ತು ಪ್ರೊ. ಟಿ.ಆರ್. ಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement