ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳವು: 3 ಮಂದಿ ಆರೋಪಿಗಳ ಬಂಧನ

Rashmi Kasaragodu
Updated On : 30 Jul 2013, 11:10 am

ಶಿವಮೊಗ್ಗ: ಕಳೆದ 2 ತಿಂಗಳ ಹಿಂದೆ ಶಿಕಾರಿಪುರ ಮಂಡಿಪೇಟೆಯ ಕೆ.ಎಸ್. ರಾಘವೇಂದ್ರ ಮತ್ತು ದೊಡ್ಡಪೇಟೆಯ  ಪಿ. ಸಿದ್ದರಾಮಯ್ಯ ಅವರ ವಾಸದ ಮನೆಯಿಂದ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿ, ಪರಾರಿಯಾಗಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಶಿಕಾರಿಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೌತ್ ಗೋವಾದವರಾಗಿದ್ದ ಬಂಧಿತರಲ್ಲಿ ನೀಲೇಶ್, ಪರುಶುರಾಮ ಹಾಗೂ ಗುರುರಾಜ್ ಸೇರಿದ್ದು, ಅವರಿಂದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಕಳವು ಮಾಡಿದ್ದ 57 ಗ್ರಾಂ ಬಂಗಾರ ಮತ್ತು ಮೂರುವರೆ ಕೆಜಿ ಬೆಳ್ಳಿ ಗಟ್ಟಿ ಹಾಗೂ ರು. 2,46 ಲಕ್ಷ ಮೌಲ್ಯದ 1 ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿಕಾರಿಪುರದ ಡಿ.ಎಸ್.ಪಿ. ಜೆ.ಬಿ. ಮಂಜುನಾಥ್, ಸಿಪಿಐ ಮಾದಪ್ಪ, ಎಎಸ್‌ಐ ಸದಾಶಿವಪ್ಪ ಅವರ ಮಾರ್ಗದರ್ಶನದಲ್ಲಿ ಶಿಕಾರಿಪುರ ವೃತ್ತದ ಗುರುವಾನಾಯ್ಕ, ಕಿರಣ್ ಕುಮಾರ್, ಭೀಮೇಶ, ರಾಮಪ್ಪ, ಮಂಜಪ್ಪ  ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement