ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಭಯೋತ್ಪಾದನೆ ನಿರ್ಲಕ್ಷ್ಯ ಸರಿಯಲ್ಲ

Rashmi Kasaragodu
Updated On : 30 Jul 2013, 11:14 am

ಕ.ಪ್ರ.ವಾರ್ತೆ  ಭದ್ರಾವತಿ  ಜು.29
ಭಯೋತ್ಪಾದನೆಯಿಂದ ಪದೇಪದೇ ದೇಶದ ಭದ್ರತೆಯ ಮೇಲೆ ದಾಳಿ ನಡೆಯುತ್ತಿದ್ದರೂ, ಸರ್ಕಾರ ಇದನ್ನು ಹತ್ತಿಕ್ಕಲು ನಿರ್ಲಕ್ಷ್ಯ ತಾಳಿರುವುದರ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಬಾಗಲಕೋಟೆಯ ವೆಂಕಟರಮಣ ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಪಟ್ಟಣದ ವೀರಶೈವ ಸಭಾ ಭವನದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಹಿಂದೂ ಸಂಘಟನಾ ಮೇಳದಲ್ಲಿ ಭಾಗವಹಿಸಿದ್ದ ಅವರು ಭಾರತ ದೇಶವು ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿದ್ದು, ಅಧ್ಯಾತ್ಮಿಕತೆಯ ತಳಹದಿ ಮೇಲೆ ಪ್ರಗತಿ ಸಾಧಿಸಿದ ದೇಶವಾಗಿದೆ ಎಂದರು.
ಹಿಂದೂ ರಾಷ್ಟ್ರ ಸ್ಥಾಪನೆ: ಚಂದ್ರಗುಪ್ತ ಮೌರ್ಯ, ಚಾಣಕ್ಯ, ಶಿವಾಜಿ ಮಹಾರಾಜ್, ಸಮರ್ಥ ರಾಮದಾಸ್, ಹಕ್ಕಬುಕ್ಕ- ವಿದ್ಯಾರಣ್ಯ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಇಂತಹ ಮಹಾನ್ ಗುರು-ಶಿಷ್ಯ ಪರಂಪರೆ ಮರೆತ ಪರಿಣಾಮ ಇಂದು ಸಮಾಜಲ್ಲಿ ಅಶಾಂತಿ ತಲೆದೋರಿದೆ. ದೇಶದ ಎಲ್ಲಾ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಏಕೈಕ ಪರಿಹಾರ ಎಂದು ಅವರು ವ್ಯಾಖ್ಯಾನಿಸಿದರು.
ವಿದೇಶೀ ಅನುಕರಣೆಯಿಂದ ನಮ್ಮ ತನವನ್ನು ಮರೆತ ಪರಿಣಾಮ ಸನಾತನ ಸಂಸ್ಕೃತಿ ನಶಿಸುತ್ತಿದೆ ಎಂದು ಸಾಗರದ ಆನಂದ ಬಾಳೆಕೊಪ್ಪ ತಿಳಿಸಿದರು. ಆಸೆ ಆಮಿಷದಿಂದ ಮತಾಂತರಗೊಂಡವರ ಬದುಕು ಎಂದಿಗೂ ಹಸನಾಗಿರಲು ಸಾಧ್ಯವಿಲ್ಲ. ಬಡತನವನ್ನು ಬಂಡವಾಳವಾಗಿಸಿಕೊಂಡು ಮತಾಂತರದಂತಹ ಹೀನಕೃತ್ಯವನ್ನೆಸಗಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ ಎಂದು ಅವರು ಎಚ್ಚರಿಸಿದರು.
ಆತ್ಮರಕ್ಷಣೆಯ ತರಬೇತಿಯ ಪ್ರಾತ್ಯಕ್ಷಿಕೆ ಮತ್ತು ಹಿಂದೂ ಧರ್ಮದ ಚಿತ್ರ ಪ್ರದರ್ಶನವನ್ನು ಸಹ ಈ ಸಂದರ್ಭದಲ್ಲಿ ತೋರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement