ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೋದಿ ಪ್ರಧಾನಿಯಾದರೆ ಅಪಾಯ

Rashmi Kasaragodu
Updated On : 30 Jul 2013, 11:15 am

ದಾವಣಗೆರೆ: ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತವು ಮತ್ತೊಂದು ಅಪಾಯವನ್ನು ಎದುರಿಸ ಬೇಕಾಗುತ್ತದೆ ಎಂದು ಹಿರಿಯ ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್ ಎಚ್ಚರಿಸಿದರು.
 ನಗರದ ನರಹರಿಶೇಟ್ ಭವನದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಮತ್ತು ಅಹಿಂದ ಜಿಲ್ಲಾ ಘಟಕ ಏರ್ಪಡಿಸಿದ್ದ ತಳ ಸಮುದಾಯಗಳು ಮತ್ತು ಪ್ರಸ್ತುತ ಸಂದರ್ಭದ ರಾಜಕೀಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್‌ನಲ್ಲಿ 2500 ಸಾವಿರ ಅಮಾಯಕ ಜನರ ಸಾವಿಗೆ ಕಾರಣರಾದ ಮೋದಿಗೆ ಪ್ರಧಾನಿ ಮಾಡಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದರು. ಕೆಳ ಸಮುದಾಯಗಳನ್ನು ಅನಾದಿಯಿಂದಲೂ ಹುಳುಗಳನ್ನಾಗಿ ಕಾಣುತ್ತಾ ಬರಲಾಗಿದೆ. ಈಚಿನ ದಿನಗಳಲ್ಲಿ ಅಲ್ಪಸಂಖ್ಯಾತರು, ದಲಿತರು, ಶೋಷಿತರು ಸಂಘ ಪರಿವಾರದ ಒಂದು ಭಾಗವಾದ ಬಿಜೆಪಿಗೆ ಸೇರುತ್ತಿರುವುದು ದುರಂತ. ಕೆಳ ಸಮುದಾಯದಲ್ಲಿ ಇಂತಹ ವಿಚಾರದ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಕುರುಬರ ಸಂಘ, ಕೆಂಗೋ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಅಹಿಂದ ಜಿಲ್ಲಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಪಂ ಉಪಾಧ್ಯಕ್ಷೆ ಶಾರದಮ್ಮ ಲಕ್ಷ್ಮಣ, ಸದಸ್ಯರಾದ ಲಕ್ಷ್ಮಿ ಮಂಜಪ್ಪ, ಎಂ. ನಾಗೇಂದ್ರಪ್ಪ, ಶ್ಯಾಗಲೆ ನಾಗಪ್ಪ, ಬಿ.ಎಂ.ಸತೀಶ, ರಾಮಚಂದ್ರ ಕಲಾಲ್, ಬಿ.ಇ. ನಾಗರಾಜ, ರಂಗಸ್ವಾಮಿ, ಮರಿಯಾಚಾರ್, ಸೊಕ್ಕೆ ನಾಗರಾಜ, ಎಚ್. ಶಂಕರ್, ಎನ್.ಜೆ. ನಿಂಗಪ್ಪ, ಎಸ್ಸೆಸ್ ಗಿರೀಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement