ಆ.2ರಂದು ಸಾರಿಗೆ ಅದಾಲತ್
ಶಿವಮೊಗ್ಗ: ಸಾರಿಗೆ ಇಲಾಖೆ ಆ.2ರಂದು ಬೆಳಗ್ಗೆ 11ಗಂಟೆಗೆ ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಅದಾಲತ್ ನಡೆಸಲಿದೆ. ಸಾರ್ವಜನಿಕರು ಸಾರಿಗೆಗೆ ಸಂಬಂಧಿಸಿದಂತಹ ದೂರು ಹಾಗೂ ಅಹವಾಲುಗಳನ್ನು ಲಿಖಿತವಾಗಿ ಅಥವಾ ಖುದ್ದಾಗಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶಾವಕಾಶ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಪಿ.ಯು.ಸಿ. ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿವಿಧ ಸ್ನಾತಕ ಪದವಿಗಳ ಪ್ರಥಮ ಸೆಮಿಸ್ಟರ್ ಪ್ರವೇಶಾತಿಗಾಗಿ ಅವಕಾಶ ಕಲ್ಪಿಸಿದೆ. ಈ ಹಿಂದೆ ಪ್ರವೇಶಕ್ಕೆ ನಿಗದಿಪಡಿಸಲಾಗಿದ್ದ ದಿನಾಂಕವನ್ನು ವಿಶೇಷ ತರಗತಿ ತೆಗೆದುಕೊಂಡು ಹಾಜರಾತಿ ಸರಿದೂಗಿಸಿಕೊಳ್ಳುವ ಷರತ್ತಿಗೊಳಪಟ್ಟು, 300 ದಂಡಶುಲ್ಕದೊಂದಿಗೆ ಆ. 3ರವರೆಗೆ ವಿಸ್ತರಿಸಲಾಗಿದೆ ಎಂದು ಕುವಿವಿ ಶೈಕ್ಷಣಿಕ ಕುಲಸಚಿವರು ತಿಳಿಸಿದ್ದಾರೆ.