ನಿಬಂಧನೆ ಸಡಿಲಿಸಲು ಆಗ್ರಹ
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಜು.30
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಹೊರಡಿಸಿರುವ ನಿಬಂಧನೆಗಳನ್ನು ವಿರೋಧಿಸಿ ಖಾಸಗಿ ವಾಹನ ಮಾಲಿಕರು ಮತ್ತು ಚಾಲಕರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ನೀಡಿದರು.
ಸುಮಾರು ವರ್ಷಗಳಿಂದ ಶಾಲೆಗೆ ಮಕ್ಕಳನ್ನು ಬಿಡುವ ಕೆಲಸ ಮಾಡಿಕೊಂಡಿರುವ ವಾಹನಗಳನ್ನು ಸುಮಾರು ಮುನ್ನೂರು ಕುಟುಂಬಗಳು ಅವಲಂಬಿಸಿವೆ. ಮೇ.1, 2013ರಂದು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ. ಆದ್ದರಿಂದ ತಾವು ನಮ್ಮ ಸಮಸ್ಯೆಯನ್ನು ಗಮನಿಸಿ ಆದೇಶದ ಕೆಲ ನಿಯಮಗಳನ್ನು ಸಡಿಲಗೊಳಿಸಬೇಕಾಗಿ ಹಾಗೂ ವಾಹನಗಳ ಬಣ್ಣ ಬದಲಾಯಿಸಲು ಮತ್ತು ವಾಹನಗಳನ್ನು ಕೊಳ್ಳಲು 3 ತಿಂಗಳ ಕಾಲಾವಕಾಶ ನೀಡಬೇಕಾಗಿ ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.