ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿರ್ದೇಶಕರ ಆಯ್ಕೆ

Rashmi Kasaragodu
Updated On : 31 Jul 2013, 11:13 am

ಭದ್ರಾವತಿ: ಭದ್ರಾವತಿ ಪೌರಸೇವಾ ನೌಕರರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನಿರ್ದೇಶಕರ ಹೆಸರುಗಳನ್ನು ಚುನಾವಣಾಧಿಕಾರಿ ಜಿ.ಕೆ. ರಘುವೀರ ಅವರು ಘೋಷಿಸಿದ್ದಾರೆ. ಆರೋಗ್ಯ ಶಾಖೆ ನಿರ್ದೇಶಕುಗಳಾಗಿ ಸಿ.ಡಿ. ನಾಗೇಂದ್ರಕುಮಾರ್, ಎನ್. ಮಂಜುನಾಥ್, ಆರ್. ರಾಜವೇಲು, ಆರ್. ದತ್ತಾತ್ರೇಯ, ವೆಂಕಟೇಶ್ ಮತ್ತು ಎನ್. ಓಬಳೇಶ್, ಕಂದಾಯ ಇಲಾಖೆ ನಿರ್ದೇಶಕರಾಗಿ ಚೇತನ್ ಕುಮಾರ್ ಎಸ್. ಮತ್ತು ಟಿ.ಆರ್. ಸತ್ಯನಾರಾಯಣ, ಕಚೇರಿ ನಿರ್ದೇಶಕರಾಗಿ ಕೃಷ್ಣ, ಎಚ್. ಶಾರದಮ್ಮ, ನಿಂಗೋಜಿರಾವ್, ಎಂ. ಸುನಿತಾಕುಮಾರಿ, ನೀರಿನ ವಿಭಾಗದ ನಿರ್ದೇಶಕರಾಗಿ ಆರ್. ಕೃಷ್ಣಮೂರ್ತಿ, ಎನ್. ರಾಮಕೃಷ್ಣ ಮತ್ತು ನಾಗರಾಜ, ಜವಾನರು ಮತ್ತು ಡಿ. ಗ್ರೂಪ್ ನಿರ್ದೇಶಕರಾಗಿ ಕೆ.ಜೆ. ಬಸವರಾಜು ಮತ್ತು ವಿಷಕಂಠಯ್ಯ, ಚಾಲಕರ ವಿಭಾಗದ ನಿದೇಶಕರಾಗಿ ಶಾಂತಪ್ಪ ಮತ್ತು ಸಿ. ಕೇಶವಮೂರ್ತಿ, ಅಭಿಯಂತರರ ವಿಭಾಗದ ನಿರ್ದೇಶಕರಾಗಿ ಸಿ. ನಾಗರಾಜು ಅವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ನಿರ್ದೇಶಕರಾಗಿ ಎಂ.ಆರ್. ಮಂಜುನಾಥ್, ಎಚ್.ಎಸ್. ನಿರಂಜನಮೂರ್ತಿ, ಎಲ್.ಎಸ್. ರಾಘವೇಂದ್ರರಾವ್, ಬಿ.ಎಂ. ಬಸವರಾಜಯ್ಯ ಮತ್ತು ವೈ.ಕೆ. ಮಂಜುನಾಥ್  ಆಯ್ಕೆಯಾಗಿದ್ದಾರೆ.
ಪ್ರವೇಶಾವಕಾಶ
ಶಿವಮೊಗ್ಗ: ಆರ್ಥಿಕವಾಗಿ ಹಿಂದುಳಿದಿದ್ದ ಬಾಗಲಕೋಟ ಜಿಲ್ಲೆಯ ಪತ್ರಿಕಾ ವಿತರಕಿ ಪ್ರೇರಣಾ ಜಿಂಗಾಡೆ ಅವರಿಗೆ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತವಾಗಿ ಕಂಪ್ಯೂಟರ್ಸೈನ್ಸ್ ಅಂಡ್ ಎಂಜಿನಿಯರಿಂಗ್ ಕೋರ್ಸ್ಗೆ ಪ್ರವೇಶ ನೀಡಿದೆ. ಎಸ್ಎಸ್ಎಲ್ಸಿ ಮತ್ತು ಡಿಪ್ಲೋಮೊ ಕಂಪ್ಯೂಟರ್ಲೈನ್ಸ್ನಲ್ಲಿ ಶೇ.80.26 ಅಂಕಪಡೆದಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement