ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರೈತರು ಮಿಶ್ರ ಬೇಸಾಯಕ್ಕೆ ಒತ್ತು ನೀಡಲಿ: ಮಡಿವಾಳ್

Rashmi Kasaragodu
Updated On : 31 Jul 2013, 11:04 am

ಕ.ಪ್ರ.ವಾರ್ತೆ  ಸೊರಬ  ಜು. 30
ಬೆಳೆಗಳ ವೈವಿಧ್ಯತೆಯಂತೆಯೆ ಅವುಗಳ ಬೆಳವಣಿಗೆಗೆ ಕೂಡ ವಿಭಿನ್ನ ವಾತಾವರಣದ ಅವಶ್ಯಕತೆ ಇರುತ್ತದೆ. ಅದನ್ನು ಮನಗಂಡು ಮಿಶ್ರ ಬೇಸಾಯಕ್ಕೆ ಮುಂದಾಗಬೇಕು ಎಂದು ಇಲ್ಲಿನ ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಮಡಿವಾಳ್ ತಿಳಿಸಿದರು.
 ಸಹ್ಯಾದ್ರಿ ಪ್ರಾಂತ್ಯ ಸಿಎಫ್ಆರ್ಡಿಎಂ ಕೋ ಸಾಗರ, ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಸೊರಬ, ಕಾಫಿ ಮಂಡಳಿ ಸಾಗರ ಇವರ ಸಹಯೋಗದಲ್ಲಿ ತಾಲ್ಲೂಕಿನ ಮೂಡುಗೋಡು ಗ್ರಾಮದ ಕಂಚಿ ಗುರುಪ್ರಸಾದ್ ಇವರ ಮನೆ ಆವರಣದಲ್ಲಿ ನಡೆದ ಕಾಫಿ ಮತ್ತು ತೋಟಗಾರಿಕೆ ಬೆಳೆಗಳ ಮಾಹಿತಿ ಶಿಬಿರ ಉದ್ದೇಶಿಸಿ ಮಾತನಾಡಿದರು.
ಮಣ್ಣಿನ ಪರೀಕ್ಷೆ:  ಬೇಸಿಗೆ ಅವಧಿಯಲ್ಲಿ ಅಡಿಕೆ ತೋಟಕ್ಕೆ ನೀರು ಕೊಡುವುದು ಎಷ್ಟು ಮುಖ್ಯವೋ ಅಷ್ಟೆ ಪ್ರಾಮುಖ್ಯತೆಯನ್ನು ಮಳೆಗಾಲದಲ್ಲಿ ನೀರುಹೊರಹಾಕುವ ಕ್ರಿಯೆಗೆ ನೀಡಬೇಕು. ಭೂಮಿಯಲ್ಲಿ ಪೋಷಕಾಂಶಗಳ ಕೊರತೆ, ಅಕಾಲಿಕ ಮಳೆ, ತೋಟಗಳಲ್ಲಿನ ಬಸಿ ಕಾಲುವೆಗಳ ಅಸ್ವಚ್ಚತೆ ಮುಂತಾದ ನ್ಯೂನತೆಯಿಂದಾಗಿ ಅಡಿಕೆ ಉದುರುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮೂಲಕ ಭೂಮಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ ಎಂದರು.
 ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ವೆಂಕಟೇಶ್ ಮಾತನಾಡಿ, ಮಲೆನಾಡ ಭಾಗದಲ್ಲಿ ಅಡಿಕೆ ಬೆಳೆಯೊಂದಿಗೆ ಕಾಫಿ ಬೆಳೆಯುವುದರಿಂದ ಆರ್ಥಿಕ ವೈಪರೀತ್ಯಗಳನ್ನು ಸರಿದೂಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪೋಷಕಾಂಶಗಳ ಮಾಹಿತಿ: ಧಾರವಾಡದ ಕ್ರಯಾಜಿನ್ಸ್ ಸಂಸ್ಥೆ ವಿಜ್ಞಾನಿ ಹರೀಶ್ ಸ್ಲೈಡ್ ಶೋ  ಮೂಲಕ ಬೆಳೆಗಳಿಗೆ ಬೇಕಾದ ಪೋಷಕಾಂಶಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಸಹ್ಯಾದ್ರಿ ಪ್ರಾಂತ್ಯದ ಸಿಎಫ್ಆರ್ಡಿಎಂಕೋಸ್ ಅಧ್ಯಕ್ಷ ವಿ.ಜಿ.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು.
 ಕೃಷಿಕ ಮೂಡುಗೋಡು ಕಂಚಿ ಶಿವರಾಂ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಕೃಷಿ ಅಧಿಕಾರಿ ವೀರಭದ್ರಪ್ಪಗೌಡ, ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಎಸ್.ಅಮೃತರಾಜ್, ಸಹಾಯಕ ತೋಟಗಾರಿಕೆ ಅಧಿಕಾರಿ ಮಂಜುನಾಥ್, ಗ್ರಾಮದ ಅನೇಕ ಅಡಿಕೆ ಬೆಳೆಗಾರರು ಇದ್ದರು.
ಅಮೃತ ಪ್ರಾರ್ಥಿಸಿ, ಅಮೃತರಾಜ್ ಸ್ವಾಗತಿಸಿದರು. ನಾರಾಯಣಮೂರ್ತಿ ವಂದಿಸಿದರು. ಪ್ರತಿಮಾ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement