ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗೋರಖ್ ಸಿಂಗ್ ವರದಿ ಜಾರಿಗೊಳಿಸಿ: ಬಿವೈಆರ್

Lingaraj Badiger
Updated On : 1 Aug 2013, 10:59 am

ಶಿವಮೊಗ್ಗ: ಮಲೆನಾಡು ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಗೋರಕ್ಸಿಂಗ್ ವರದಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಸಂಸದ ಬಿ.ವೈ. ರಾಘವೇಂದ್ರ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೋರಕ್ಸಿಂಗ್ ವರದಿ ಜಾರಿಗೆ ಒತ್ತಾಯಿಸಿ ಈ ಹಿಂದೆ ಕೆಜೆಪಿ ಮುಖಂಡ ಆರ್.ಎಂ. ಮಂಜುನಾಥಗೌಡ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ನಾಯಕರು ಪಾಲ್ಗೊಂಡಿದ್ದರು ಎಂದರು.
ಮುಖ್ಯವಾಗಿ ಸಾಂಪ್ರದಾಯಿಕ ಮತ್ತು ನಾಲಾ ಬೆಳೆಗಾರರು ಎಂದು ವರ್ಗಿಕರಿಸಲಾಗಿದೆ. ಈ ತಾರತಮ್ಯ ಮಾಡದೆ ಎಲ್ಲಾ ಅಡಕೆ ಬೆಳೆಗಾರರು ಎಂದು ಪರಿಗಣಿಸಿ ಸಾಲ ಮನ್ನಾ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು. ನಂತರ ಬಯಲುಸೀಮೆಯ ಅಡಕೆ ಬೆಳೆಗಾರರಿಗೂ ಸವಲತ್ತುಗಳನ್ನು ವಿಸ್ತರಿಸಬೇಕು ಎಂದರು.
ಗೋರಕ್ಸಿಂಗ್ ವರದಿ ನೀಡುವ ಸಮಯದಲ್ಲಿಯೇ ಬೇರೆ ಸಮಸ್ಯೆ ಇತ್ತು. ನಂತರವೇ ಬೇರೆ ಸಮಸ್ಯೆಯನ್ನು ಅಡಕೆ ಬೆಳೆಗಾರರು ಎದುರಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.  ಈ ಬಾರಿ ಅಧಿಕ ಮಳೆ ಬಿದ್ದ ಪರಿಣಾಮ ತೀರ್ಥಹಳ್ಳಿ, ಸಾಗರ, ಸೊರಬ ಹಾಗೂ ಹೊಸನಗರ ಭಾಗದಲ್ಲಿ ಅಡಕೆಗೆ ಕೊಳೆರೋಗ ಹೆಚ್ಚಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೇ.50ರಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ಮೈಲುತುತ್ತ ವಿತರಿಸಲಾಗಿತ್ತು. ಆದರೆ, ಈಗ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement