ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Rashmi Kasaragodu
Updated On : 1 Jun 2013, 11:13 am

ಸಾಗರ: ಒಂದೇ ಕುಟುಂಬದ ಮೂವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ಮಾರಲಗೋಡು ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಗ್ರಾಮದ ಪದ್ಮಯ್ಯ ಜೈನ್ (65) ಅವರ ಪತ್ನಿ ಕಾಂತಮ್ಮ (55) ಹಾಗೂ ಪುತ್ರ ರಾಜೇಂದ್ರ (30) ಮೃತಪಟ್ಟವರು. ಪದ್ಮಯ್ಯ ಜೈನ್ ಪುತ್ರಿ ಪಕ್ಕದ ಮನೆಯ ತಮ್ಮದೇ ಜನಾಂಗದ ಹುಡುಗನನ್ನು ಪ್ರೀತಿಸುತ್ತಿದ್ದಳು. ಇದು ಮನೆಯವರಿಗೆ ಯಾರಿಗೂ ಇಷ್ಟವಿರಲಿಲ್ಲ ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಪುತ್ರಿ, ತಂದೆ ತಾಯಿಗೆ ತಿಳಿಸದೆ ಮನೆಬಿಟ್ಟು ಹೋಗಿ ರಿಜಿಸ್ಟರ್ ಮದುವೆ ಆಗಿರುವುದೆ ಘಟನೆಗೆ ಕಾರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement