ಕೌಶಲ್ಯ ಅಭಿವೃದ್ಧಿಯಿಂದ ಯಶಸ್ಸು: ಶಶಿಕಾಂತ್ ಸೆಂಥಿಲ್
ಶಿವಮೊಗ್ಗ: ಯಶಸ್ಸು ಅಳತೆ ಮಾಡಲು ಬರುವುದಿಲ್ಲ. ವ್ಯಕ್ತಿ ತನ್ನಲ್ಲಿರುವ ಕೌಶಲ್ಯವನ್ನು ಗುರುತಿಸಿಕೊಂಡು ಅದನ್ನು ಅಭಿವೃದ್ಧಿಪಡಿಸಿಕೊಂಡಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ನಗರದಲ್ಲಿ ಶನಿವಾರ ರಾಜೀವ್ ಗಾಂಧಿ ನ್ಯಾಷನಲ್ ಯೂತ್ ಡೆವಲಪ್ಮೆಂಟ್ ಸೆಂಟರ್ ಹಾಗೂ ಸಮನ್ವಯ ಸಂಸ್ಥೆ ಆಯೋಜಿಸಿದ್ದ 5 ದಿನಗಳ ಯುವಜನತೆಗೆ ಕೌಶಲ್ಯ ಅಭಿವೃದ್ಧಿ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಅವರು, ಪ್ರತಿಯೊಬ್ಬರೂ ತನ್ನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಕೌಶಲ್ಯ ಪಡೆದಿರುತ್ತಾರೆ. ಯುವ ಜನಾಂಗ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ತನ್ನಲ್ಲಿ ಯಾವ ಕೌಶಲ್ಯವಿದೆ ಎಂಬುದನ್ನು ಗುರುತಿಸಿಕೊಳ್ಳಬೇಕು ಎಂದರು. ಕಾರ್ಯಾಗಾರ ಕುರಿತು ಸಮನ್ವಯ ಕಾರ್ಯದರ್ಶಿ ಕೆ.ಎಂ. ಕಾಶಿನಾಥ್ಪ್ರಾಸ್ತಾವಿಕ ಭಾಷಣ ಮಾಡಿದರು. ಎನ್ಎಸ್ಎಸ್ ರಾಷ್ಟ್ರೀಯ ಸಲಹಾ ಮಂಡಳಿ ನಿವೃತ್ತ ನಿರ್ದೇಶಕ ಡಾ. ಎಚ್.ಎಸ್. ಸುರೇಶ್, ಎಫ್ಪಿಎಐ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಎಸ್.ಐ. ಬಿರಾದಾರ್ ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಾದ ಆರ್. ಗೌತಮನ್, ರುದ್ರೇಗೌಡ, ಸಂದ್ಯಾ ಕಾವೇರಿ, ಇ. ಪ್ರೇಮಾ, ಜಗದೀಶ್ ಸಂಪಳ್ಳಿ ಹಾಗೂ. ರಾಜೇಶ್ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.