ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ
ಶಿರಾಳಕೊಪ್ಪ: ಶಿರಾಳಕೊಪ್ಪ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಅತ್ಯಂತ ಉತ್ಸಾಹದಿಂದ ನಡೆಯಿತು. ಬೆಳಗ್ಗೆ ಶಾಲಾ ಸಮಯಕ್ಕೆ ಉತ್ಸಾಹದಿಂದ ಶಾಲೆಗೆ ಆಗಮಿಸಿದ ಮಕ್ಕಳು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕೊಡಲೆಂದು ಜೋಡಿಸಿಇಟ್ಟಂತಹ ಪುಸ್ತಕ ಸಮವಸ್ತ್ರ ನೋಡುತ್ತಾ ಇದ್ದಹಾಗೆ, ಆಯಾ ತರಗತಿಯ ಶಿಕ್ಷಕಿಯರು ಮಕ್ಕಳಿಗೆ ಪುಸ್ತಕ ಹಾಗು ಸಮವಸ್ತ್ರ ಕೊಟ್ಟಾಗ ಸಂತಸದಿಂದ ಸ್ವೀಕರಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಮಂಜ್ಯಾನಾಯ್ಕ ಮತ್ತು ಶಿಕ್ಷಕಿಯರು, ಕಳೆದ ವರ್ಷ ನಮ್ಮ ಶಾಲೆಯ ಮಕ್ಕಳೊಂದಿಗೆ ಶಿಕ್ಷಣ ದಿಂದ ವಂಚಿತ ವಾಗುತ್ತಿದ್ದ ಅಲೆಮಾರಿ ಜನಾಂಗದ 5 ಮಕ್ಕಳನ್ನು ದತ್ತು ಪಡೆದು ಅವರಿಗೆ ಪುಸ್ತಕ ಸಮವಸ್ತ್ರ ಹಾಗು ಶಾಲೆಯಲ್ಲಿ ಸಿದ್ದಪಡಿಸಿದ ಬಿಸಿ ಊಟ ಕೊಟ್ಟು ಶಿಕ್ಷಣ ಕೊಡಲಾಯಿತು. ಮಕ್ಕಳು ಸಿಕ್ಕಲ್ಲಿ ಅವರನ್ನು ದತ್ತುಪಡೆದು ಅವರಿಗೆ ಶಿಕ್ಷಣ ಕೊಡುವ ಯೋಚನೆ ಇದೆ ಎಂದರು.
ನಮ್ಮ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಗಳಂತೆ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹಾಗೆಯೇ ನೀನಾ ತಂಡದ ಕಾರ್ಯಕ್ರಮ ಸೇವಾದಳ, ವಿಶೇಷವಾಗಿ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.