ಮಳೆ ಕಾರಣ ಪಕ್ಕಕ್ಕೆ ಸರಿದ ಮಳಿಗೆಗಳು
ಶಿವಮೊಗ್ಗ (ಕುವೆಂಪು ಮಹಾಮಂಟಪ)
ಕನ್ನಡ ಸಾಹಿತ್ಯ ಸಮ್ಮೇಳನ ಎಂದ ಮೇಲೆ ಅಲ್ಲಿ ಪುಸ್ತಕಗಳು ಸದ್ದು ಮಾಡಲೇಬೇಕು. ಮಳೆಯ ಅಭಾವದಿಂದ ಸಮ್ಮೇಳನ ನಡೆಯುವ ಸ್ವಲ್ಪ ದೂರದಲ್ಲಿ ಪುಸ್ತಕ ಮಳಿಗೆಗಳನ್ನು ತರೆದಿತ್ತಾದರೂ ಪುಸ್ತಕ ಪ್ರಿಯರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ.
ಪುಸ್ತಕ ಪ್ರೇಮಿಗಳು ಸಮ್ಮೇಳನ ನಡೆಯುವ ಸ್ಥಳದಲ್ಲಿ ಪುಸ್ತಕ ಮಳಿಗೆಗಳು ಇಲ್ಲದಿರುವುದನ್ನು ಕಂಡು ಕೆಲ ಹೊತ್ತು ನೀರಸ ಪ್ರತಿಕ್ರಿಯೆ ನೀಡಿದರಾದರೂ, ಪಕ್ಕದಲ್ಲಿಯೇ (ಎಟಿಎನ್‌ಸಿಸಿ ಕಾಲೇಜು ಆವರಣ) ಮಳಿಗೆಗಳಿರುವುದನ್ನು ತಿಳಿದು ಪುಸ್ತಕ ಖರೀದಿ ಮಾಡಲು ಅತ್ತ ಕಡೆ ನಡೆದರು.
ಸಾಹಿತ್ಯ ಭಂಡಾರ: ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೆ.ವಿ. ಪೂರ್ಣಚಂದ್ರ ತೇಜಸ್ವಿ ಮುಂತಾದ ಸಾಹಿತ್ಯ ಕ್ಷೇತ್ರದ ದಿಗ್ಗಜರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರು ಬರೆದಿರುವ ಮಲೆಗಳಲ್ಲಿ ಮದುಮಗಳು, ಮೂಕಜ್ಜಿಯ ಕನಸುಗಳು, ಅಬಚೂರಿನ ಪೋಸ್ಟಾಫೀಸ್ ಮತ್ತಿತರ ಪುಸ್ತಕಗಳು ಸದಾ ನಮ್ಮನ್ನು ಅವರ ನೆನಪಿನಂಗಳದಲ್ಲಿ ದೂಡುತ್ತವೆ.
ಪುಸ್ತಕ ಮನೆ, ಕನ್ನಡ ಪುಸ್ತಕ ಪ್ರಾಧಿಕಾರ, ಮೈಸೂರಿನ ಧಾತ್ರಿ ಪ್ರಕಾಶನ, ಬೆಂಗಳೂರಿನ ಸರ್ಕಾರಿ ನೌಕರರ ಮಿತ್ರ ಸೇವಾ ಕಾರ್ಯ ಪುಸ್ತಕಗಳ ಪ್ರಕಾಶನ, ಶಿವಮೊಗ್ಗದ ವಿಜಯವಾಣಿ ಪಬ್ಲಿಕೇಷನ್, ಗೀತಾಂಜಲಿ ಪ್ರಕಾಶನ ಸೇರಿದಂತೆ ಹತ್ತಾರು ಪುಸ್ತಕ ಪ್ರಕಾಶನಗಳು ಇವರೆಲ್ಲರನ್ನು ಮತ್ತೆ ನಮ್ಮ ನಡುವೆ ಕರೆ ತಂದರು.
ಇಂದೂ ಪುಸ್ತಕ ಖರೀದಿಗೆ ಅವಕಾಶ: ಶನಿವಾರ ಪುಸ್ತಕಗಳ ಖರೀದಿ ಮಾಡಲು ಸಮಯ ಸಿಗದಿರುವ ಪುಸ್ತಕ ಪ್ರೇಮಿಗಳು ಬೇಸರಪಡುವ ಅಗತ್ಯವಿಲ್ಲ. ಭಾನುವಾರವು ಸಹ ಸಮ್ಮೇಳನ ನಡೆಯುವುದರಿಂದ ಮತ್ತಷ್ಟು ಬರಹಗಾರರ ಪುಸ್ತಕಗಳು ಬರಲಿದ್ದು, ಇಂದು ಕೂಡ ಮುಂಜಾನೆಯಿಂದಲೇ ಮಳಿಗೆಗಳು ತೆರೆಯುವುದರಿಂದ ಪುಸ್ತಕ ಖರೀದಿ ಮಾಡಬಹುದು.
ಇಂಗ್ಲಿಷ್ ಪುಸ್ತಕ: ಒಂದು ಪುಸ್ತಕ ಮಳಿಗೆಯನ್ನು ಇಂಗ್ಲೀಷ್ ಪುಸ್ತಕ ಕಾಣಿಸಿದ್ದರಿಂದ ಕನ್ನಡಾಭಿಮಾನಿಗಳನ್ನು ಕೆಲ ಕಾಲ ಕೆರಳಿಸಿತ್ತು. ಇಂಗ್ಲೀಷ್ ಪುಸ್ತಕ ಇಟ್ಟಿರುವುದನ್ನು ವಿರೋಧಿಸಿ ಅವರು ವಾದಕ್ಕಿಳಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಳಿಗೆ ಹಾಕಲು ಅವಕಾಶ ನೀಡಿದ್ದಾರೆ. ನಾನು ಯಾವ ಕಾರಣಕ್ಕೂ ಇಂಗ್ಲೀಷ್ ಪುಸ್ತಕ ತೆಗೆಯುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ಸುದೀರ್ಘ ವಾದವಿವಾದದ ನಂತರವೂ ಸಹ ಇಂಗ್ಲೀಷ್ ಪುಸ್ತಕಗಳು ಅಲ್ಲಿಂದ ತೆರವಾಗಲಿಲ್ಲ.
-ಮೋಹನ್ ಕುಮಾರ್ ಎನ್.