ಡಾ. ಕುಮಾರಚಲ್ಯರಿಗೆ ಆಹ್ವಾನ
ಶಿವಮೊಗ್ಗ: ಚನ್ನರಾಯಪಟ್ಟಣ ತಾಲೂಕು 2ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕವಿ ಡಾ. ಕುಮಾರಚಲ್ಯ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಆಹ್ವಾನ ನೀಡಲಾಯಿತು. ಜೂನ್ 14ರಂದು ಜರುಗುವ ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗದ ಪ್ರಾಧ್ಯಾಪಕ ಡಾ. ಕುಮಾರಚಲ್ಯ ಅವರ ಮನೆಗೆ ಚನ್ನರಾಯಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಲೋಕೇಶ್, ಕಾರ್ಯದರ್ಶಿ ಶಿವರಾಮ್, ತಹಶೀಲ್ದಾರ್ ಪಿ.ಜಿ. ನಟರಾಜ್, ಕ.ಸಾ.ಪ. ಮಾಜಿ ಅಧ್ಯಕ್ಷ ಎಚ್. ಸಿದ್ದೇಗೌಡ ಹಲವರು ಆಗಮಿಸಿ ಆಹ್ವಾನಿಸಿದರು.