ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿವಾಹದ ಯಶಸ್ಸಿಗೆ ಪರಸ್ಪರ ಸಹಕಾರ ಅಗತ್ಯ

Lingaraj Badiger
Updated On : 4 Jun 2013, 11:04 am

ಕ.ಪ್ರ.ವಾರ್ತೆ, ಸೊರಬ, ಜೂ.3
ವಿವಾಹದ ಯಶಸ್ಸಿಗೆ ಪರಸ್ಪರ ಅರ್ಥೈಸಿಕೊಳ್ಳುವಿಕೆಯ ಮನೋಭಾವ ಅಗತ್ಯವಿದೆ ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ತಿಳಿಸಿದರು.
ತಾಲೂಕು ತಾಳಗುಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಬದುಕಿನ ಬಂಡಿಗೆ ಅಗತ್ಯ ಕೀಲುಗಳು ಗಂಡ ಮತ್ತು ಹೆಂಡತಿ. ಇಲ್ಲಿ ನಾನು ಹೆಚ್ಚು, ನಾನು ಕಡಿಮೆ ತಾರತಮ್ಯತೆಗಳ ಅಗತ್ಯವಿಲ್ಲ, ಇಲ್ಲಿ ಸೋಲು, ಗೆಲವು ಸಮಾನ, ಜೀವನದ ಪ್ರತಿ ಹಂತಗಳನ್ನು ಸಮಾನವಾಗಿ ಪ್ರೀತಿಸಿ ಒಬ್ಬರಿಗೊಬ್ಬರು ಬೆನ್ನೆಲುಬಾದಾಗ ವೈವಾಹಿಕ ಜೀವನ ಸಾರ್ಥಕಗೊಳ್ಳುತ್ತದೆ. ಇಂತಹ ಸಾರ್ಥಕತೆಯಲ್ಲಿಯೆ ನಾಡಿನ ಉತ್ತಮ ಭವಿಷ್ಯವೂ ಅಡಗಿದೆ ಎಂದು ನೂತನ ವಧುವರರಿಗೆ ಕಿವಿಮಾತನಾಡಿದರು.
ದಲಿತ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಸಮರ್ಪಕ ಶಿಕ್ಷಣದ ಮೂಲಕ ದುಡಿಯುವ ವರ್ಗಗಳಿಗೆ ಸರಳ ವಿವಾಹಗಳ ಕುರಿತು ಅರಿವು ಮೂಡಿಸಬೇಕು, ಇಂತಹ ಚಿಂತನೆ ಕಾರ್ಯರೂಪಕ್ಕಿಳಿಸ ಬೇಕು. ಈ ನಿಟ್ಟಿನಲ್ಲಿ ಅಪ್ಪಾಜಿ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಅಪ್ಪಾಜಿ ಸೇವಾ ಟ್ರಸ್ಟ್ನ 5 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ಒಟ್ಟು 7 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಟ್ರಸ್ಟ್ ಅಧ್ಯಕ್ಷ ಬಿ.ಆರ್. ಸ್ವಾಮಿ, ಚೂಡಾಮಣಿ,ಅರುಣ ಕುಮಾರ್, ಚಂದ್ರಪ್ಪ ಮಾಸ್ತರ್, ರಮೇಶ್, ಹರೀಶ್, ಮೈತ್ರಿ, ಸನಮ್, ಮೀನಾಜ್, ಹೂವಪ್ಪ, ಮಾಸ್ತ್ಯಪ್ಪ, ಮಂಜಪ್ಪ ಮೊದಲಾದವರು ಇದ್ದರು.

ಇಂದು ವಿದ್ಯುತ್ವ್ಯತ್ಯಯ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಜೂನ್ 4ರಂದು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಹೊಳಲೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಲ್ಲಿ ವಿದ್ಯುತ್ವ್ಯತ್ಯಯವಾಗಲಿದೆ.
ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಶಂಕಿತ ಡೆಂಘೀಗೆ ಮಹಿಳೆ ಬಲಿ
ಶಿವಮೊಗ್ಗ: ಶಂಕಿತ ಡೆಂಘೀಗೆ ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದ ಭಾಗ್ಯ (35) ಮೃತಪಟ್ಟಿದ್ದಾರೆ.
ಅವರು ಜೂನ್ 1ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಕೊನೆಯುಸಿರೆಳೆದರು.
ಈ ಸಾವಿಗೆ ಡೆಂಘಿಯೇ ಕಾರಣ ಎಂಬುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಇನ್ನಷ್ಟೇ ಖಚಿತಪಡಿಸಬೇಕಾಗಿದೆ.
ನಕಲಿ ವೈದ್ಯರ ಸೆರೆ
ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರಾದ ಗೀತಾ ಮತ್ತು ಶೀನ ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರು ಹೊಸೂಡಿಯಲ್ಲಿ ಅಬರ್ಶನ್ ಕೇಂದ್ರ ನಡೆಸುತ್ತಿದ್ದರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರಿಗೆ ಡಾ.ಸೀತಾರಾಮ ಶೆಟ್ಟಿ ಎಂಬ ವೈದ್ಯರು ಅನುಭವ ಪತ್ರ ನೀಡಿದ್ದರು.
ಡಿಎಚ್ಒ ಶಿವಣ್ಣ ರೆಡ್ಡಿ ಹಾಗೂ ನೋಡಲ್ ಅಧಿಕಾರಿ ಕೃಷ್ಣರಾವ್ ನೇತೃತ್ವದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ಔಷಧಿ ವಶಕ್ಕೆ ಪಡೆಯಲಾಯಿತು.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement