ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ವಿದ್ಯುತ್ ವ್ಯತ್ಯಯ

Lingaraj Badiger
Updated On : 5 Jun 2013, 11:08 am

ಶಿವಮೊಗ್ಗ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಘಟಕ-4, ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ಹೊಸ ಪರಿವರ್ತಕ ಅಳವಡಿಸಲು ಮತ್ತು ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 5ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಪ್ರದೇಶದ ವ್ಯಾಪ್ತಿಗೊಳಪಡುವ ಕೋಟೆ ರಸ್ತೆ, ಕೋಟೆ ಪೊಲೀಸ್ ಠಾಣೆ ಎದುರು, ಎಲ್‌ಐಸಿ ಆಫೀಸ್, ಎಸ್‌ಪಿಎಂ ರಸ್ತೆ, ಓ.ಟಿ. ರಸ್ತೆ, ಮಾರಿಗದ್ದಿಗೆ ಸುತ್ತಮುತ್ತ, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ಕೃಷ್ಣ ಕೆಫೆ ಹಿಂಭಾಗ, ಅಪ್ಪಾಜಿ ರಾವ್ ಕಾಂಪೌಂಡ್, ಬಿ.ಎಚ್. ರಸ್ತೆ, ಉದಯನ ಪೆಟ್ರೋಲ್ ಬಂಕ್‌ನಿಂದ ವಿನಾಯಕ ಕಾಂಪ್ಲೆಕ್ಸ್ ಡಬಲ್ ರಸ್ತೆಯವರೆಗೆ, ಶರ್ಮಾ ವಿಡಿಯೋ ಎದುರು ರಸ್ತೆ, ಜಿಲ್ಲಾ ತರಬೇತಿ ಕೇಂದ್ರ ಮತ್ತು ಸುತ್ತಮುತ್ತಲ ಪ್ರದೇಶಗಳು, ಅಶೋಕ ರಸ್ತೆ, ಶಿವಾಜಿ ರಸ್ತೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement